
ರಹೀಂ ಹತ್ಯಾ ಪ್ರಕರಣ: ಮತ್ತೋರ್ವನ ಸೆರೆ, ಬಂಧಿತರ ಸಂಖ್ಯೆ 11ಕ್ಕೇರಿಕೆ
ಬಂಟ್ವಾಳ: ತಾಲೂಕಿನ ಕೊರಿಯಾಳ ಗ್ರಾಮದ ಇರಾಕೋಡಿಯಲ್ಲಿ ನಡೆದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಖಲಂಧರ್ ಶಾಫಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಸೋಮವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿದೆ.
ಅಮ್ಮುಂಜೆ ಗ್ರಾಮದ ಚಂದ್ರಹಾಸ ಎಂಬವರ ಪುತ್ರ ಸಾಹಿತ್ (24) ಬಂಧಿತ ಆರೋಪಿಯಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಎಸ್‌ಐ ಕಲೈಮಾರ್ ಮತ್ತವರ ತಂಡ ಎಸ್ಪಿ ಡಾ.ಅರುಣ್ ಕುಮಾರ್ ಅವರ ಮಾರ್ಗದರ್ಶನ ಡಿವೈಎಸ್ಪಿ ವಿಜಯಪ್ರಸಾದ್ ಅವರ ನೇತೃತ್ವದಲ್ಲಿ ಗ್ರಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರ ನೇತೃತ್ವದಲ್ಲಿ ಅಬೆಟ್ಟು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ 10 ಮಂದಿ ಆರೋಪಿಯನ್ನು ಬಂಧಿಸಿದ್ದು. ಇದೀಗ ಬಂಧಿತರ ಸಂಖ್ಯೆ 11 ಕ್ಕೇರಿದೆ. ಇನ್ನಷ್ಟು ಮಂದಿ ಆರೋಪಿಗಳನ್ನು ಗುರುತಿಸಿರುವ ಪೊಲೀಸರು ಶೋಧ ಕಾರ್ಯಮುಂದುವರಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕೂರಿಯಾಳ ಗ್ರಾಮದ ದೀಪಕ್, ಅಮ್ಮುಂಚೆ ಗ್ರಾಮದ ಶಿವಾಜಿನಗರ ನಿವಾಸಿಗಳಾದ ಪೃಥ್ವಿರಾಜ್, ಚಿಂತನ್, ತೆಂಕದಳ್ಳೂರು ನಿವಾಸಿ ಸುಮಿತ್ ಆಚಾರ್ಯ, ಬಡಗಬೆಳ್ಳೂರು ನಿವಾಸಿ ರವಿರಾಜ್, ತೆಂಕಬೆಳ್ಳೂರು ನಿವಾಸಿ ಅಭಿನ್ ರೈ ಹಾಗೂ ಬಡಗಬೆಳ್ಳೂರು ನಿವಾಸಿ ತೇಜಾಕ್ಷ್ಯ ಶೃಂಗೇರಿ ಬೆಟ್ಟಗೆರ ಗ್ರಾಮದ ರವಿ ಸಂಜಯ್, ತುಂಬೆ ಗ್ರಾಮ ನಿವಾಸಿ ಶಿವಪ್ರಸಾದ್ ಹಾಗೂ ಪುದು ಗ್ರಾಮದ ಪ್ರದೀಪ್‌ನನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪುದು ಗ್ರಾಮದ ನಿವಾಸಿ ಭರತ್ ಕುಮ್ಗಲು ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೊಲೀಸರು ಜೂ.4 ರಂದು ನ್ಯಾಯಾಲಯದಿಂದ ಸರ್ಚ್ ವಾರಂಟ್ ವಡೆದು ಆತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರು.