ಜು.7 ರಿಂದ ಕಟೀಲಿನಲ್ಲಿ 21ನೇ ವರ್ಷದ ತಾಳಮದ್ದಲೆ ಸಪ್ತಾಹ

ಜು.7 ರಿಂದ ಕಟೀಲಿನಲ್ಲಿ 21ನೇ ವರ್ಷದ ತಾಳಮದ್ದಲೆ ಸಪ್ತಾಹ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದ ವತಿಯಿಂದ ನಡೆಯುವ 21ನೇ ವರ್ಷದ ತಾಳಮದ್ದಲೆ ಸಪ್ತಾಹ ಜುಲೈ 7ರಿಂದ ಜು.13 ರವರೆಗೆ ಪ್ರತಿದಿನ ಸಂಜೆ 4ರಿಂದ ನಡೆಯಲಿದೆ.

ಜು.7 ರಂದು ಶರಸೇತು-ಯತಿಪೂಜೆಯಲ್ಲಿ ಪದ್ಯಾಣ ಗೋವಿಂದ ಭಟ್ಟ, ಚಿನ್ಮಯ ಭಟ್ಟ ಕಲ್ಲಡ್ಕ, ಮುರಳೀಧರ ಭಟ್ಟ ಕಟೀಲು, ದಯಾನಂದ ಶೆಟ್ಟಿಗಾರ್, ವಾಸುದೇವರಂಗ ಭಟ್ಟ ಮಧೂರು, ಪ್ರೊ. ಪವನ್ ಕಿರಣಕೆರೆ, ಗಣರಾಜ ಕುಂಬ್ಳೆ, ಡಾ. ಜಗದೀಶ ಶೆಟ್ಟಿ ಸಿದ್ದಾಪುರ, ಪುತ್ತಿಗೆ ಬಾಲಕೃಷ್ಣ ಭಟ್ಟ, ಡಾ. ವಾದಿರಾಜ ಕಲ್ಲೂರಾಯ, ರಾಮ ಜೋಯಿಸ ಬೆಳ್ಳಾರೆ, ಸುಣ್ಣಂಬಳ ವಿಶ್ವೇಶ್ವರ ಭಟ್ಟ ಭಾಗವಹಿಸಲಿದ್ದಾರೆ.

ಜು.8 ರಂದು ಖಾಂಡವ ದಹನದಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಸತೀಶ್ ಶೆಟ್ಟಿ ಬೋಂದೇಲ್, ಜನಾರ್ದನ ತೋಳ್ಪಡಿತ್ತಾಯ, ಮುರಾರಿ ಕಡಂಬಳಿತ್ತಾಯ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಶ್ರೀರಮಣಾಚಾರ್ಯ ಕಾರ್ಕಳ, ವಿನಯಾಚಾರ್ ಹೊಸಬೆಟ್ಟು, ರವಿರಾಜ ಪನೆಯಾಲ, ಹರೀಶ ಬಳಂತಿಮೊಗರು, ಜಬ್ಬಾರ್ ಸಮೋ ಸಂಪಾಜೆ, ದಿನೇಶ್ ಶರ್ಮ ಕೊಯ್ಯೂರು ಇದ್ದಾರೆ.

ಜು.9 ರಂದು ಸತ್ವಪರೀಕ್ಷೆಯಲ್ಲಿ ಗಿರೀಶ್ ರೈ ಕಕ್ಕೆಪದವು, ದೇವಿಪ್ರಕಾಶ್ ರಾವ್ ಕಟೀಲು, ಪದ್ಯಾಣ ಶಂಕರನಾರಾಯಣ ಭಟ್ಟ, ಅಕ್ಷಯ ರಾವ್ ವಿಟ್ಲ, ವಾಸುದೇವ ರಂಗ ಭಟ್ಟ ಮಧೂರು, ಡಾ. ಪ್ರದೀಪ ಸಾಮಗ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಸುರೇಶ ಕುದ್ರೆಂತ್ತಾಯ, ಸತೀಶ ಶೆಟ್ಟಿ ಮೂಡುಬಗೆ, ಪ್ರಸಾದ ಪೂಜಾರಿ ಭಟ್ಕಳ, ವಿಷ್ಣುಪ್ರಸಾದ್ ರಾವ್, ಹರಿಪಾದೆ ಪಾಲ್ಗೊಳ್ಳಲಿದ್ದಾರೆ.

ಜು.10 ರಂದು ಗೀತೋಪದೇಶ-ಶರಶಯ್ಯೆಯಲ್ಲಿ ಪ್ರದೀಪ್‌ಕುಮಾರ್ ಗಟ್ಟಿ, ರಮೇಶ ಭಟ್ಟ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನಿವಾಸ ರಾವ್ ಪುತ್ತೂರು, ವಿದ್ವಾನ್ ಕೃಷ್ಣಕುಮಾರ್ ಮೈಸೂರು, ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ವಿದ್ವಾನ್ ಕಮಲಾದೇವಿಪ್ರಸಾದ ಆಸ್ರಣ್ಣ, ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಇದ್ದಾರೆ.

ಜು.11 ರಂದು ಗಾಂಡೀವ ನಿಂದನೆಯಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಹರಿಪ್ರಸಾದ್ ಕಾರಂತ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರೀ, ಶ್ರೀಧರ ವಿಟ್ಲ, ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಸದಾಶಿವ ಆಳ್ವ ತಲಪ್ಪಾಡಿ, ಸಾವಿತ್ತ್ರೀ ಶಾಸ್ತ್ರೀ, ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ಸುಣ್ಣಂಬಳ ವಿಶ್ವೇಶ್ವರ ಭಟ್ಟ ಭಾಗವಹಿಸುತ್ತಾರೆ.

ಜು.12 ರಂದು ಆದಿನಾರಾಯಣ ದರ್ಶನದಲ್ಲಿ ಸತ್ಯನಾರಾಯಣ ಪುಣಿಚಿತ್ತಾಯ, ದೇವಿಪ್ರಸಾದ್ ಆಳ್ವ ತಲಪಾಡಿ, ಕೃಷ್ಣಪ್ರಕಾಶ ಉಳಿತ್ತಾಯ, ಯೋಗೀಶ್ ಆಚಾರ್ಯ, ಸೂರಿಕುಮೇರು ಕೆ. ಗೋವಿಂದ ಭಟ್, ರಾಧಾಕೃಷ್ಣ ಕಲ್ಚಾರ್, ಪಶುಪತಿ ಶಾಸ್ತ್ರೀ ಶಿರಂಕಲ್ಲು, ಉಮೇಶ ನೀಲಾವರ ಶ್ರೀಧರ ಡಿ. ಎಸ್., ಶಾಂತಾರಾಮ ಪ್ರಭು ನಿಟ್ಟೂರು ಭಾಗವಹಿಸುತ್ತಾರೆ.

ಜು.13 ರಂದು ಬೆಳಗ್ಗೆ ನರನಾರಾಯಣ ದರ್ಶನ ಪ್ರಸಂಗದಲ್ಲಿ ಕಾವ್ಯಶ್ರೀ ನಾಯಕ್, ಲೋಕೇಶ್ ಕಟೀಲು, ರಾಜೇಶ್ ಐ., ಸರ್ಪಂಗಳ ಈಶ್ವರ ಭಟ್ಟ, ಡಾ. ಶ್ರುತಕೀರ್ತಿರಾಜ, ವಿದ್ವಾನ್ ಕಮಲಾದೇವಿಪ್ರಸಾದ ಆಸ್ರಣ್ಣ, ವಿಷ್ಣು ಶರ್ಮ ವಾಟೆಪಡ್ಪು, ಸದಾನಂದ ಆಸ್ರಣ್ಣ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪಶುಪತಿ ಶಾಸ್ತ್ರೀ ಶಿರಂಕಲ್ಲು, ನಾ. ಕಾರಂತ ಪೆರಾಜೆ ಭಾಗವಹಿಸುತ್ತಾರೆ. ಅಂದು ಅಪರಾಹ್ನ ಗಂಟೆ 2.30ರಿಂದ ಕರ್ಣಾರ್ಜುನ ಕಾಳಗ ನಡೆಯಲಿದೆ.ದಿನೇಶ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ ದೇವಿಪ್ರಸಾದ್ ಕಟೀಲು, ಚೈತನ್ಯಕೃಷ್ಣ ಪದ್ಯಾಣ, ರಾಮಪ್ರಕಾಶ ಕಲ್ಲೂರಾಯ, ವಾಸುದೇವ ರಂಗ ಭಟ್ಟ ಮಧೂರು, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶಂಭು ಶರ್ಮ ವಿಟ್ಲ ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟ, ಪ್ರದ್ಯುಮ್ನ ಮೂರ್ತಿ ಕಡಂದಲೆ ಭಾಗವಹಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article