ಮಂಗಳೂರು ದಕ್ಷಿಣ ಯುವ ಮೋರ್ಚಾ ನಗರ ದಕ್ಷಿಣ ಮಂಡಲದಿಂದ ಹುತಾತ್ಮರಾದ ಯೋಧರಿಗೆ ಗೌರವ ನಮನ

ಮಂಗಳೂರು ದಕ್ಷಿಣ ಯುವ ಮೋರ್ಚಾ ನಗರ ದಕ್ಷಿಣ ಮಂಡಲದಿಂದ ಹುತಾತ್ಮರಾದ ಯೋಧರಿಗೆ ಗೌರವ ನಮನ


ಮಂಗಳೂರು: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಗರದ ಕದ್ರಿ ಪಾರ್ಕ್ ಬಳಿ ಇರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಾಯಿತು. 


ಬಳಿಕ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವು ಇಡೀ ಭಾರತೀಯರಿಗೆ ಹೆಮ್ಮೆಯ ದಿನವೂ ಹೌದು. ಅದರ ಜೊತೆಗೆ ವೀರಯೋಧರನ್ನು ಕಳೆದುಕೊಂಡ ನೋವೂ ಇದೆ. ಈ ಯುದ್ಧದಲ್ಲಿ ಸೌರಭ್ ಕಾಲಿಯಾ, ವಿಕ್ರಮ್ ಭಾತ್ರ, ಜಸ್ವಿಂದರ್ ಸಿಂಗ್, ಮನೋಜ್ ಕುಮಾರ್ ಪಾಂಡೆಯರಂತಹ 527 ವೀರಕಲಿಗಳನ್ನು ಕಳೆದುಕೊಂಡಿದ್ದೇವೆ. ಈ ದಿನ ಅಂತಹ ಎಲ್ಲಾ ವೀರ ಯೋಧರ ಧೈರ್ಯವನ್ನು, ಅವರ ಕುಟುಂಬಗಳ ತ್ಯಾಗವನ್ನು ಪ್ರತಿಯೊಬ್ಬರೂ ನೆನೆಯಲೇಬೇಕು ಎಮದು ಹೇಳಿದರು.


ದಯವಿಟ್ಟು ನಾವೆಲ್ಲರೂ ಆಗಾಗ ಮಕ್ಕಳೊಂದಿಗೆ ಯುದ್ಧ ಸ್ಮಾರಕಗಳಿಗೆ ಭೇಟಿ ನೀಡಿ, ಅವರಿಗೆ ಸೈನಿಕರ ಮಹತ್ವವನ್ನು ತಿಳಿಸಬೇಕು. ಇಂದು ನಮ್ಮ ಸೈನ್ಯ ಮತ್ತು ದೇಶದ ಭದ್ರತೆಯ ವಿಷಯ ಬಂದಾಗ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ಕೊಡುವ ಪ್ರಧಾನಿ ನರೇಂದ್ರ ಮೋದಿಯಿಂದಾಗಿ ಭಾರತವು ಅತ್ಯಂತ ಬಲಿಷ್ಠವಾಗಿದೆ. ಹಾಗಾಗಿಯೇ ಪಾಕಿಸ್ತಾನ ಮಾತ್ರವಲ್ಲದೇ ಚೀನಾಕ್ಕೂ ಅವರದೇ ಭಾಷೆಯಲ್ಲಿ ಉತ್ತರ ಕೊಟ್ಟಾಗಿದೆ ಎಂದರು.

ಈ ಸಂದರ್ಭದಲ್ಲಿ ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಪ್ರೇಮಾನಂದ ಶೆಟ್ಟಿ,  ಪೂರ್ಣಿಮಾ, ಗಣೇಶ್ ಕಾರ್ಣಿಕ್, ರವಿಶಂಕರ್ ಮಿಜಾರ್, ಅಶ್ವಿತ್ ಕೊಟ್ಟಾರಿ, ನಿಕಟಪೂರ್ವ ಮ.ನ.ಪಾ ಸದಸ್ಯರುಗಳು, ಮಾಜಿ ಸೈನಿಕರು, ಮಂಡಲದ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು, ಜಿಲ್ಲಾ ಪ್ರಮುಖರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಪ್ರಮುಖರು, ಕಾರ್ಯಕರ್ತರು, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article