ಹದಗೆಟ್ಟಿರುವ ಬೈಕಂಪಾಡಿ-ಅಂಗರಗುಂಡಿ-ಜೋಕಟ್ಟೆ ರಸ್ತೆ ದುರಸ್ಥಿಗೊಳಿಸಲು ಕೆಐಎಡಿಬಿಗೆ ಡಿವೈಎಫ್‌ಐ ಮನವಿ: ಪ್ರತಿಭಟನೆಯ ಎಚ್ಚರಿಕೆ

ಹದಗೆಟ್ಟಿರುವ ಬೈಕಂಪಾಡಿ-ಅಂಗರಗುಂಡಿ-ಜೋಕಟ್ಟೆ ರಸ್ತೆ ದುರಸ್ಥಿಗೊಳಿಸಲು ಕೆಐಎಡಿಬಿಗೆ ಡಿವೈಎಫ್‌ಐ ಮನವಿ: ಪ್ರತಿಭಟನೆಯ ಎಚ್ಚರಿಕೆ


ಮಂಗಳೂರು: ಬೈಕಂಪಾಡಿ ಕೈಗಾರಿಕಾ ವಲಯದಿಂದ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ರಸ್ತೆ ಅವ್ಯವಸ್ಥೆಯಿಂದ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ ಇದರಿಂದ ರಸ್ತೆಯು ವಾಹನ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿದೆ. ರಸ್ತೆ ಗುಂಡಿಗಳಿಂದಾಗಿ ದ್ವಿಚಕ್ರ ಸವಾರರು ಬಿದ್ದು ಸಾವು ನೋವುಗಳಿಗೆ ಕಾರಣವಾಗುತ್ತಿದೆ. ವಾಹನಗಳು ಹಾನಿಗೊಳಗಾಗುತ್ತಿದೆ. ಅಲ್ಲದೆ ಕೆಲವೆಡೆ ಚರಂಡಿ ನಿರ್ಮಿಸದೆ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಲಾಗಿದೆ ಇದರಿಂದ ಮಳೆ ನೀರು ರಸ್ತೆಯಲ್ಲೇ ನಿಂತು ಪಾದಚಾರಿಗಳಿಗೂ ನಡೆದಾಡಲು ಸಾಧ್ಯವಾಗುತ್ತಿಲ್ಲ. ಸರಕಾರಿ ಶಾಲೆಗೆ ಹೋಗುವ ಮಕ್ಕಳು ಕೆಸರೆರೆಚಿಸಿಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ.


ಕಂಪೆನಿಗಳಿಗೆ ಕೆಲಸಕ್ಕೆ ಬರುವ ಮಹಿಳಾ ಕಾರ್ಮಿಕರಿಗೂ ಇದರಿಂದ ತೊಂದರೆ ಉಂಟಾಗಿದೆ. ಜನಪ್ರತಿನಿದಿನಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ, ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಬೈಕಂಪಾಡಿ-ಅಂಗರಗುಂಡಿ-ಜೋಕಟ್ಟೆ ಮುಖ್ಯ ರಸ್ತೆಯ ದುರಸ್ಥಿಗೊಳಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಬೈಕಂಪಾಡಿ ಅಂಗರಗುಂಡಿ ಘಟಕದ ನೇತೃತ್ವದಲ್ಲಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 


ಮುಂದಿನ 15 ದಿನಗಳೊಳಗೆ ರಸ್ತೆ ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಡಿವೈಎಫ್‌ಐ ನೇತೃತ್ವದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.


ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಅಂಗರಗುಂಡಿ ಘಟಕ ಅಧ್ಯಕ್ಷರಾದ ತೌಸೀಫ್, ಕಾರ್ಯದರ್ಶಿ ನಿಝಾಮ್, ಉಪಾಧ್ಯಕ್ಷ ಸೈಫಲ್, ಅನ್ಸಾರ್, ಕೋಶಾಧಿಕಾರಿ ಶಕೀಲ್, ಪ್ರಮುಖರಾದ ಶಮ್ರಾನ್, ಅಝ್ಲವ್, ಫರಾನ್, ರಾಝಿಕ್, ಸಿದ್ದಿಕ್, ಸಲೀಂ, ಗೂಡ್ಸ್ ಟೆಂಪೋ ಚಾಲಕರ ಸಂಘದ ಮುಖಂಡರಾದ ಫೈವ್ ಸ್ಟಾರ್ ಖಾದರ್, ಹೈದರ್ ಮತ್ತಿತರರು ಉಪಸ್ಥಿತರಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article