
ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ: ಮೂಡುಬಿದಿರೆಯಲ್ಲಿ ರೂ.4,22,95,425 ಪರಿಹಾರ ವಿತರಣೆ
Wednesday, July 23, 2025
ಮೂಡುಬಿದಿರೆ: ತಾಲೂಕು ಆಡಳಿತ ಸೌಧ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 169 (13) ಸಾಣೂರು ಬಿಕರ್ಣಕಟ್ಟೆ ವಿಭಾಗದ ರಸ್ತೆ ಅಗಲಗೊಳಿಸುವುದು, ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪಡಿಸಲಾದ ಜಮೀನುಗಳ ಪರಿಹಾರ ಪಾವತಿಯನ್ನು ಬುಧವಾರ ನಡೆಸಲಾಯಿತು.
4,22,95,425 ಮೊತ್ತವನ್ನು ಭೂ ಮಾಲೀಕರಿಗೆ ಪರಿಹಾರವಾಗಿ ಪಾವತಿಸಿದ ದಾಖಲೆಯನ್ನು ಅಧಿಕಾರಿಗಳು ನೀಡಿದ್ದಾರೆ. ಪುತ್ತಿಗೆ ಗ್ರಾಮದ ಎಂಟು ಮಂದಿ ಭೂ ಮಾಲೀಕರಿಗೆ, ಮಾರ್ಪಾಡಿ ಗ್ರಾಮದ ಮೂವರಿಗೆ, ಬಡಗ ಎಡಪದವಿನ ಇಬ್ಬರಿಗೆ, ತೆಂಕ ಮಿಜಾರಿನ ಮೂವರಿಗೆ, ಬೆಳುವಾಯಿಯ ಇಬ್ಬರಿಗೆ,ಹಾಗೂ ಪಡುಮಾರ್ನಾಡಿನ ಒಬ್ಬರಿಗೆ ಪರಿಹಾರಧನ ಪಾವತಿಸಲಾಯಿತು.