ಮಂಜೇಶ್ವರ ಠಾಣೆ ಎಎಸ್‌ಐ ನೇಣಿಗೆ ಶರಣು

ಮಂಜೇಶ್ವರ ಠಾಣೆ ಎಎಸ್‌ಐ ನೇಣಿಗೆ ಶರಣು


ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯ ಎಎಸ್‌ಐ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಕುಟ್ಟಿಕೋಲು ನಿವಾಸಿ ಮಧು (50) ಮೃತಪಟ್ಟವರು. 

ಇಂದು ಬೆಳಗ್ಗೆ ಪೊಲೀಸ್ ಕ್ವಾಟರ್ಸಿನೊಳಗೆ ಮೃತದೇಹ ಕ೦ಡು ಬ೦ದಿದೆ. ಮಾಹಿತಿ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮಧು ಅವರು ಅವಿವಾಹಿತರಾಗಿದ್ದಾರೆ. ಈ ಹಿಂದೆ ಬದಿಯಡ್ಕ ಆದೂರು, ಕಾಸರಗೋಡು ನಗರ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರು ಪೊಲೀಸ್ ಠಾಣೆಗೆ ಬರುವ ಜನರ ಜತೆ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿದ್ದರು. ಮಧು ಅವರು ಆತ್ಮಹತ್ಯೆ ಮಾಡಲು ಕಾರಣವೇನೆ೦ದು ತಿಳಿದು ಬಂದಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article