ಸೆ.14 ರಂದು ಉಳ್ಳಾಲದಲ್ಲಿ ತಾಲೂಕು ಮಟ್ಟದ ದಸರಾ ಕಬಡ್ಡಿ-2025

ಸೆ.14 ರಂದು ಉಳ್ಳಾಲದಲ್ಲಿ ತಾಲೂಕು ಮಟ್ಟದ ದಸರಾ ಕಬಡ್ಡಿ-2025

ಮಂಗಳೂರು: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಹಾಗೂ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಉಳ್ಳಾಲ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಸೆ.14 ರಂದು ಬೆಳಗ್ಗೆ 10 ಗಂಟೆಯಿಂದ ಉಳ್ಳಾಲದ ಪುರಸಭೆ ಮೈದಾನದಲ್ಲಿ ದಸರಾ ಕಬಡ್ಡಿ-2025 ನಡೆಯಲಿದೆ.

ದಿ. ರವೀಂದ್ರ ಮರೋಳಿ ಸ್ಮರಣಾರ್ಥ ನಡೆಯಲಿರುವ ಈ ಪಂದ್ಯಾವಳಿ ಉಳ್ಳಾಲ ತಾಲೂಕು ಮಟ್ಟದಲ್ಲಿ ನಡೆಯಲಿದೆ. ಪ್ರಥಮ ಸ್ಥಾನ ವಿಜೇತರಿಗೆ 10,000 ರೂ. ಮತ್ತು ಟ್ರೋಫಿ, ದ್ವಿತೀಯ ಸ್ಥಾನಿಗಳಿಗೆ 6000 ರೂ. ಮತ್ತು ಟ್ರೋಫಿ, ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ತಲಾ 3000 ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದಲ್ಲದೆ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸವ್ಯಸಾಚಿ ಪ್ರಶಸ್ತಿಗಳನ್ನು ನೀಡಲಾಗುವುದು. 

ಹೆಚ್ಚಿನ ಮಾಹಿತಿಗಾಗಿ ಮೊ.ನಂ: 8880462587 ಅಥವಾ 7899445010 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article