ರಥಬೀದಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಲಿಬಾಲ್ ಪ್ರೀಮಿಯರ್ ಲೀಗ್-2025 ಉದ್ಘಾಟನೆ
Sunday, September 7, 2025
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.6 ರಂದು ಜಿಎಫ್‌ಜಿಸಿ ಕಾರ್‌ಸ್ಟ್ರೀಟ್ ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಸನ್-1 ಪಂದ್ಯಕೂಟದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ್ ಭಂಡಾರಿ ನೆರವೇರಿಸಿದರು.
ಬಳಿಕ ಅವರು ವಿದ್ಯಾರ್ಥಿಗಳ ವಾಲಿಬಾಲ್ ಪ್ರೀಮಿಯರ್ ಲೀಗ್-2025 ಪಂದ್ಯಾಟಕ್ಕೆ ಶುಭ ಹಾರೈಸಿದರು. ನಂತರ ಅವರು ವಿದ್ಯಾರ್ಥಿಗಳಿಗೆ ಸೋಲು ಗೆಲುವು ಜೀವನದಲ್ಲಿ ಇದ್ದದ್ದೇ ಆದ್ದರಿಂದ ಒಳ್ಳೆಯ ಆಟವಾಡಿ ಎಂದು ಪ್ರೋತ್ಸಾಹಿಸಿದರು.
ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ದುರ್ಗಪ್ಪ ಕಜೆಕಾರ್ ಅವರು ತಂಡಗಳಿಗೆ ಆಡಲು ಪ್ರೋತ್ಸಾಹಿಸಿದರು.
ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಶುಭ ಕೆ.ಎಚ್. ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಹೃನ್ಮ ವಂದಿಸಿದರು. ಲತಿಕಾ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಬೆಸ್ಟ್ ಅಟ್ಯಾಕರು ಪ್ರೀತಮ್, ಬೆಸ್ಟ್ ರಿಸಿವರ್ ಜಿತೇಶ್, ಬೆಸ್ಟ್ ಆಲ್ ರೌಂಡರ್ ಯಶಸ್ ಪಡೆದುಕೊಂಡರು. ಪ್ರಥಮ ಸ್ಥಾನ ಕಲಿಯುಗ ತಂಡ, ದ್ವಿತೀಯ ಸ್ಥಾನ ತ್ರಿಶೂಲ್ ತಂಡ, ತೃತೀಯ ಸ್ಥಾನ ಸಿಕ್ಸ್ ರೈಡರ್ ಹಾಗೂ ಚತುರ್ಥ ಸ್ಥಾನವನ್ನು ಲೆಗೆಸಿ ತಂಡ ಪಡೆದುಕೊಂಡವು.






