
ವಿಶ್ವೇಶ್ವರಯ್ಯ ಅವರ ಕರ್ತವ್ಯ ನಿಷ್ಠೆ, ಆಡಳಿತ ಕ್ಷಮತೆ ಇಂಜಿನಿಯರ‍್ಸ್‌ಗಳಿಗೆ ಮಾದರಿ: ಡಾ. ಚಿನ್ನಗಿರಿಗೌಡ
ಅವರು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವೃತ್ತಿಪರ ಸೇವಾಯೋಜನೆಯ ಅಂಗವಾಗಿ ಸೆ.೧೮ ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ‘ಇಂಜಿನಿಯರ‍್ಸ್ ದಿನಾಚರಣೆ”ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಮ್ಮ ವಿಶಿಷ್ಟ ಕಾರ್ಯಕ್ಷಮತೆ ಮೂಲಕ ಇಂಜಿನಿಯರ್‌ಗಳ ಶಕ್ತಿ ಸಾಮರ್ಥ್ಯ ಕೌಶಲ್ಯ ಎಂಬುದನ್ನು ದೇಶಕ್ಕೆ ನಿದರ್ಶನ ನೀಡಿದ ವಿಶ್ವ ಮನ್ನಣೆ ಪಡೆದ ಶ್ರೇಷ್ಠ ವ್ಯಕ್ತಿ. ಅವರ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಹಾಗೂ ಆಡಳಿತ ಕ್ಷಮತೆ ಇಂದಿನ ಇಂಜಿನಿಯರ‍್ಸ್‌ಗಳಿಗೆ ಮಾದರಿ ಎಂದರು.
ಈ ಸಂದರ್ಭದಲ್ಲಿ ನಗರದ ಖ್ಯಾತ ಸಿವಿಲ್ ಇಂಜಿನಿಯರ್ ಸತೀಶ್ ರಾವ್ ಇಡ್ಯಾ ಅವರು ಇಂಜಿನಿಯರ್ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಸಾಧಿಸಿದ ಅಪ್ರತಿಮ ಸಾಧನೆಗಳನ್ನು ಪರಿಗಣಿಸಿ ರೋಟರಿ ಸಂಸ್ಥೆಯ ‘ಆದರ್ಶ ಇಂಜಿನಿಯರ್’ ಪ್ರಸಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು ಜವಾಬ್ದಾರಿ ಹೆಚ್ಚಿದೆ ಮತ್ತು ಇನ್ನಷ್ಟು ಸಾಧಿಸಲು ಪ್ರೇರಣೆಯಾಗಿದೆ. ಇಂಜಿನಿಯರ್ ವೃತ್ತಿ ಒಂದು ಗೌರವಾನ್ವಿತ ವೃತ್ತಿಯಾಗಿದ್ದು, ಯುವ ಇಂಜಿನಿಯರ್‌ಗಳು ನೂತನ ವಿನ್ಯಾಸಗಳಿಗೆ ಪ್ರಾದ್ಯಾನತೆ ನೀಡಬೇಕೆಂದು ಕರೆ ನೀಡಿ ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಯುವಜನ ಸೇವೆ ಯೋಜನೆಯ ನಿರ್ದೇಶಕ ನಿತಿನ್ ದೇವಾಡಿಗ ಅವರು ಪ್ರಶಸ್ತಿ ವಿಜೇತರರ ಪರಿಚಯ, ಸಾಧನೆಗಳ ವಿವರಣೆ ನೀಡಿ ಅಭಿನಂದನಾ ಭಾಷಣ ಮಾಡಿದರು.
ಸಂಸ್ಥೆಯ ಅಧ್ಯಕ್ಷೆ ಸಜ್ನ ಭಾಸ್ಕರ್ ಸ್ವಾಗತಿಸಿ, ಇಂಜಿನಿಯರ‍್ಸ್ ದಿನಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ ಸಂಸ್ಥೆಯ ಭವಿಸ್ಯದ ಸಮಾಜ ಸೇವಾ ಚಟುವಟಿಕೆಗಳ ವಿವರ ನೀಡಿ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ವಾರ್ಧಾಕೂಟದಲ್ಲಿ ವಿಜೇತರಾದವರನ್ನು ಹಾಗೂ ಇಂಜಿನಿಯರ್ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯದರ್ಶಿ ಪದ್ಮನಾಭ ನಾಯಕ್ ಸಂಸ್ಥೆಯ ಮಾಸಿಕ ವರದಿಯನ್ನು ಮಂಡಿಸಿದರು. ರೋಟರಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ರೈ, ಸಂಸ್ಥೆಯ ಮಾಜಿ ಅಧ್ಯಕ್ಷ ಭಸವ ಕುಮಾರ್ ಉಪಸ್ಥಿತರಿದ್ದರು.