ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್
ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಕ್ಲಬ್‌ನ ಅಧ್ಯಕ್ಷ ಹರೀಶ್ ಎಂ.ಕೆ ಪಂದ್ಯಾಟ ಉದ್ಘಾಟಿಸಿ, ಎಕ್ಸಲೆಂಟ್ ವಿದ್ಯಾಸಂಸ್ಥೆ ಕಳೆದ ಹದಿಮೂರು ವರ್ಷಗಳಿಂದ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ರೋಟರಿಯ ಎಲ್ಲಾ ಕಾರ್ಯಚಟುವಟಿಕೆಗಳಿಗೂ ಸ0ಸ್ಥೆ ಸಹಕಾರ ನೀಡುತ್ತಾ ಬಂದಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡ ಪೂರಕ ವಾತಾವರಣವನ್ನು ಕಲ್ಪಿಸಿ ಕೊಟ್ಟಿದೆ. ಈ ಕ್ಯಾಂಪಸ್ಸಿನ ಶುಚಿತ್ವ, ವಿದ್ಯಾರ್ಥಿಗಳ ಶಿಸ್ತು ಉಳಿದವರಿಗೆ ಮಾದರಿ ಎಂದರು.
ಎಕ್ಸಲೆಂಟ್ ಸಮೂಹ ಶಿಕ್ಷಣಾ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆ ವಹಿಸಿ, ಮನಸ್ಸು ಮತ್ತು ದೇಹದ ಆರೋಗ್ಯ ವೃದ್ಧಿಸಲು ಮತ್ತು ಏಕತಾನತೆಯನ್ನು ಹೋಗಲಾಡಿಸಲು ಕ್ರೀಡೆ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕ್ರೀಡೆಯನ್ನು ಗೆಲ್ಲಲು ಕೌಶಲ, ವೇಗ ಮತ್ತು ತಂತ್ರಗಳ ಪಾತ್ರ ಮಹತ್ತರವಾದದ್ದು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಪಂದ್ಯಾಟದ ಪರಿವೀಕ್ಷಕ ನವೀನ್ ಹೆಗ್ಡೆ, ಎಕ್ಸಲೆಂಟ್ ವಿದ್ಯಾ ಸ0ಸ್ಥೆಯ ದೈಹಿಕ ಶಿಕ್ಷಕ ಎಸ್.ಎಸ್ ಪಾಟೀಲ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಮಹೇಂದ್ರ ಜೈನ್ ಸ್ವಾಗತಿಸಿದರು. ಉಪನ್ಯಾಸಕ ವಿಕ್ರಮ ನಾಯಕ್ ವಂದಿಸಿದರು. ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ನಿರೂಪಿಸಿದರು.