ಮಂಗಳೂರು ಶಾರದಾ ಮಹೋತ್ಸವ ಸಂಪನ್ನ

ಮಂಗಳೂರು ಶಾರದಾ ಮಹೋತ್ಸವ ಸಂಪನ್ನ


ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಆಚಾರ್ಯ ಮಠ ವಠಾರದಲ್ಲಿ 102 ವರ್ಷಗಳಿಂದ ಆಚರಿಸಲ್ಪಟ್ಟ ಇತಿಹಾಸ ಪ್ರಸಿದ್ಧ ಮಂಗಳೂರು ಶಾರದಾ ಮಹೋತ್ಸವದ 103ನೇ ವರ್ಷದ ಪ್ರಯುಕ್ತ ವಿಶೇಷ ಹಾಗೂ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ಸಂಪನ್ನಗೊಂಡಿತು. 

ನಾಲ್ಕು ದಿನಗಳ ಪರ್ಯಂತ ಶ್ರೀ ದೇವಿಯ ಮೃತಿಕಾ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ಪ್ರತಿದಿನ ಮಾತೆಯ ವಿಗ್ರಹಕ್ಕೆ ವಿಶೇಷ ಸರಸ್ವತಿ, ದುರ್ಗಾ, ಚಂಡಿಕಾ ದೇವಿ ಅಲಂಕಾರದೊಂದಿಗೆ ಅಲಂಕರಿಸಿ ಕೊನೆಯ ದಿನಂದಂದು ಶಾರದಾ ಮಾತೆಯ ಅಲಂಕಾರದಿಂದ ಶೃಂಗರಿಸಿ ಶೋಭಾಯಾತ್ರೆ ನಡೆಯಿತು.

ಶೋಭಾಯಾತ್ರೆಯಲ್ಲಿ ವಿಶೇಷ ಹರಕೆಯ ಹುಲಿವೇಷಧಾರಿಗಳಿಂದ ಹುಲಿವೇಷ ನರ್ತನ ಸೇವೆ, ಕೇರಳದ ಸುಪ್ರಸಿದ್ದ ಚೆಂಡೆ ವಾದನ, ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ದೇವಳದ ಸ್ವಯಂಸೇವರಿಂದ ಶಾರದಾ ಮಾತೆಯ ವಿಗ್ರಹಕ್ಕೆ ಭುಜ ಸೇವೆಯೊಂದಿಗೆ ಪ್ರಾರಂಭಗೊಂಡು ಶ್ರೀ ವೆಂಕಟರಮಣ ದೇವಳದಿಂದ ಹೊರಟು ಗದ್ದೆಕೇರಿ, ನವಭಾರತ್ ವೃತ್ತ, ಡೋಂಗೇರಕೇರಿ, ನ್ಯೂ ಚಿತ್ರ ಜುಂಕ್ಷನ್, ಲೋಯರ್ ಕಾರ್ಸ್ಟ್ರೀಟ್, ರಥಬೀದಿಯಲ್ಲಿ ಶೋಭಾಯಾತ್ರೆ ನಡೆದು ಮಹಾಮಾಯ ತೀರ್ಥದಲ್ಲಿ ಜಲಸ್ತ೦ಭನಗೊಳಿಸಲಾಯಿತು.

ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲ ಕೃಷ್ಣ ಶೆಣೈ, ಪಂಡಿತ್ ನರಸಿಂಹ ಆಚಾರ್ಯ, ಕಾಶೀನಾಥ್ ಆಚಾರ್ಯ, ಸುರೇಶ್ ಆಚಾರ್ಯ, ಜಯಂತ್ ಆಚಾರ್ಯ, ಶಾರದಾ ಮಹೋತ್ಸವ ಸಮಿತಿಯ ಜಿ. ದತ್ತಾತ್ರೆಯ ಭಟ್, ಸುರೇಶ್ ವಿ. ಕಾಮತ್, ಸತೀಶ್ ಪ್ರಭು, ಗಣೇಶ್ ಬಾಳಿಗಾ ಶ್ರೀ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ, ಗಣೇಶ್ ಕಾಮತ್ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

ದೇಶ, ವಿದೇಶಗಳಿಂದ ಸಹಸ್ರಾರು ಶ್ರೀ ಮಾತೆಯ ಭಜಕರು ಪಾಲ್ಗೊಂಡು ಪುನೀತರಾದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article