‘ಭಜನೆ’ಯ ವಿಚಾರದಲ್ಲಿ ಜನರ ಮನಸ್ಥಿತಿ ಬದಲಾಗಬೇಕಿದೆ

‘ಭಜನೆ’ಯ ವಿಚಾರದಲ್ಲಿ ಜನರ ಮನಸ್ಥಿತಿ ಬದಲಾಗಬೇಕಿದೆ


‘ಪೂಜಿಸುವುದಿದ್ದರೆ ಭಗವಂತನನ್ನು ಪೂಜಿಸು ಭಜಿಸುವುದಿದ್ದರೆ ಭಗವಂತನನ್ನು ಭಜಿಸು, ನಿನ್ನ ಅನುರೇಣು ತೃಣಕಾಸ್ತ್ರದಲ್ಲಿ ಒಲಿಯುವವನು ಅವನು’. ಭಜನೆ ಎಂಬುದು ದೇವರನ್ನು ಒಲಿಸಿಕೊಳ್ಳಲು ಇರುವ ಏಕೈಕ ಸುಲಭವಾದ ಮಾರ್ಗ. ‘ಭಜನೆ ಇದ್ದಲ್ಲಿ ವಿಭಜನೆ ಇಲ್ಲ’, ಭಜನೆಯಿಂದ ಬದಲಾವಣೆ ಇಂತಹ ಹಲವಾರು ಘೋಷಣೆಗಳು ಕೇಳಿ ಬಂದರು ಇತ್ತೀಚಿನ ದಿನಗಳಲ್ಲಿ ಭಜನೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ.

ವಿವಿಧ ರೀತಿಯ ಭಜನಾ ಸ್ವರೂಪಗಳು ಅದರಲ್ಲಿ ಈ ಕುಣಿತ ಭಜನೆ ಎಂಬುದು ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಹತ್ತಿರವಾಗುತ್ತಿದೆ ಮತ್ತು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಇದು ನಮ್ಮ ಸಮಾಜಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ದುರುಪಯೋಗ ಪಡಿಸುವಂತಹ ಕ್ರಿಮಿಗಳು ಹುಟ್ಟಿಕೊಂಡಿದೆ. ಈ ಕುಣಿತ ಭಜನೆಯಲ್ಲಿ ನಮ್ಮ ಕಣ್ಣಿಗೆ ಹೆಚ್ಚಾಗಿ ಕಾಣುವುದು ಹೆಣ್ಣು ಮಕ್ಕಳು, ತನ್ನ ಮನೆಯಲ್ಲಿ ಯಾವುದೇ ರೀತಿಯ ಅಭ್ಯಂತರವಿಲ್ಲದೆ ಭಜನೆಗೆ ಕಳಿಸುವುದು ಸಾಮಾನ್ಯವಾಗಿದೆ.

ದೇವರ ಸೇವೆ ಎಂದು ನೋಡದೆ ಅದನ್ನು ವ್ಯವಹಾರ ರೀತಿಯಲ್ಲಿ ನೋಡುವುದು ಹೆಚ್ಚಾಗುತ್ತಿರುವುದು, ಕೆಲವೊಂದು ಕಡೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲಿ ವ್ಯವಸ್ಥೆಪಕರು ಅಥವಾ ಭಜನೆಯ ಕಲಿಸುವ ಗುರುಗಳು ಭಜನೆಗೆ ಬರುವ ವಿದ್ಯಾರ್ಥಿಗಳನ್ನು ಭಜನಾತಿಗಳು ಎಂದು ನೋಡದೆ ಕಾಮದ ದೃಷ್ಟಿಯಿಂದ ನೋಡಿ ಹೆಣ್ಣು ಮಕ್ಕಳು ಆ ಕಾಮದ ಬಲೆಗೆ ಬಿದ್ದು, ಈ ಭಜನೆ ಎಂಬ ಹೆಸರಿಗೆ ಮಸಿ ಬಲೆಯುವಂತ ಕೆಲಸ ನಮ್ಮ ಈ ಸಮಾಜದಲ್ಲಿ ನಡೆಯುತ್ತಿದೆ. ವಿಪರ್ಯಾಸವೇನೆಂದರೆ ಈ ವಿಚಾರ ಕೆಲವರಿಗೆ ತಿಳಿದಿದ್ದರೂ ತಿಳಿಯದ ರೀತಿಯಲ್ಲಿ ನಟಿಸುತ್ತಿದ್ದಾರೆ ಅದೇ ಜಾಗದಲ್ಲಿ ಅವರ ಮನೆಯ ಹೆಣ್ಣು ಮಕ್ಕಳು ಇದ್ದಿದ್ದರೆ ಸುಮ್ಮನಿರುತ್ತಿದ್ದರೇ?.

ಭಜನೆ ಎಂಬುದು ಕೇವಲ ದೇವರ ಸೇವೆಯ ಹೊರತು ಅದು ವ್ಯವಹಾರವಲ್ಲ ಕಾಮುಕರಿಗೆ ಭಜಿಸುವ ಜಾಗವಲ್ಲ, ಇನ್ನಾದರೂ ಈ ಕೃತ್ಯಗಳು ಕಂಡುಬಂದರೆ ಧ್ವನಿ ಎತ್ತೋಣ!. ಇಂಥ ವಿಷಯದಲ್ಲಿ ಮೂರ್ಖರಾಗಿದ್ದು, ನಮ್ಮ ಧರ್ಮದ ಪಾವಿತ್ರ್ಯತೆಗೆ ಧಕ್ಕೆ ತರುವುದು ಬೇಡ.

-ನಿರೀಕ್ಷಾ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article