ದಕ್ಷಿಣ ಕನ್ನಡ ಶತಾಯುಷಿ ರಮೇಶ್ ಶೆಟ್ಟಿ ನಿಧನ Sunday, February 8, 2026 ಮೂಡುಬಿದಿರೆ: ಶತಾಯುಷಿ ಮಿಜಾರು ಮುಂಡಬೆಟ್ಟು ಗುತ್ತು ರಮೇಶ ಶೆಟ್ಟಿ (99)ಫೆ.7 ರಂದು ನಿಧನ ಹೊಂದಿದರು. ಪತ್ನಿ, ಪುತ್ರ, 2 ಪುತ್ರಿಯರನ್ನು ಅವರು ಅಗಲಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಅವರು ಮಿಜಾರು ಶಾಸ್ತಾವು ಶ್ರೀ ಭೂತನಾಥೇಶ್ವರ ಭಜನ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.