ಭಾಗೀರಥಿ ಶೆಟ್ಟಿ ನಿಧನ
Sunday, February 8, 2026
ಮೂಡುಬಿದಿರೆ: ಮೂಡುಬಿದಿರೆ ಜೈನ ಹೈಸ್ಕೂಲ್ ನಲ್ಲಿ ಅಧ್ಯಾಪಕ ರಾಗಿದ್ದ ನಿಂಜೂರು ಪಡುಮನೆ ದಿ. ಚಂದ್ರಶೇಖರ ಶೆಟ್ಟಿ ಅವರ ಪತ್ನಿ ಭಾಗೀರಥಿ ಶೆಟ್ಟಿ (87) ಫೆ 8ರಂದು ಪುತ್ತೂರು ಅರಿಯಡ್ಕದಲ್ಲಿ ನಿಧನ ಹೊಂದಿದರು.
ಸ್ವಂತ ಮಕ್ಕಳಿಲ್ಲದೇ ಇದ್ದರೂ ತನ್ನ ಪತಿಯ ಹಾಗೂ ತವರಿನ ಕಡೆಯ ಅದೆಷ್ಟೋ ಮಕ್ಕಳಿಗೆ ತಾಯಿಯಾಗಿ ಅವರನ್ನು ಬೆಳೆಸಿ ಆಸರೆ ನೀಡಿ,ವಿದ್ಯೆ ಕೊಡಿಸಿ ವೈದ್ಯಕೀಯ, ಎಂಜಿನಿಯರಿಂಗ್, ಶಿಕ್ಷಣ ಮೊದಲಾದ ವೃತ್ತಿಪರ ರಂಗಗಳಲ್ಲಿ ಜೀವನ ಕಟ್ಟಿ ಕೊಳ್ಳುವಂತೆ ಮಾಡಿದವರು ಭಾಗೀರಥಿ ಶೆಟ್ಟಿ.