ನೊಂದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ: ಇಬ್ಬರ ಬಂಧನ
ಬಂಧಿತರನ್ನು ಸುಶಾಂತ್ ಪೂಜಾರಿ ಯಾನೆ ಸುಶಾಂತ್ ಅಂಕುಶ್ ಪೂಜಾರಿ ಯಾನೆ ಸುಶಾಂತ್ ಜಿ. ಕರ್ಕೇರಾ (32) ಹಾಗೂ ಮೂಲ್ಕಿ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ನೊಂದ ಮಹಿಳೆಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿ ಮ್ಯಾಟ್ರಮೋನಿ ಆನ್‌ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ 02-02-2025 ರಲ್ಲಿ ಮದುವೆಯಾಗಿದ್ದಲ್ಲದೆ ನಂಬಿಸಿ ಹಂತ ಹಂತವಾಗಿ 6,60,00) ರೂ. ಹಣವನ್ನು ಪಡೆದುಕೊಂಡು ಮೋಸ ಮಾಡುವ ಉದ್ದೇಶದಿಂದ 15-11-2025 ರಂದು ನಾಪತ್ತೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿನ ಆರೋಪಿ ಸುಶಾಂತ್ ಪೂಜಾರಿ ಫೆ.5 ರಂದು ಪತ್ತೆ ಹಚ್ಚಿ ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಆರೋಪಿಯೂ ಮ್ಯಾಟ್ರಮೋನಿ ಆನ್‌ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಈ ಮೊದಲು 2021ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುತ್ತಾನೆ. ಹಾಗೂ ಉಡುಪಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿರುತ್ತಾನೆ. ಮುಂಬೈನ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬೆಂಗಳೂರಿನಲ್ಲಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುತ್ತಾನೆ ಕಾರ್ಕಳದ ಒಂದು ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.