ಪಣಂಬೂರು ಸಾಮೂಹಿಕ ಯೋಗಾಭ್ಯಾಸ, ಸಮುದ್ರಪೂಜೆ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ಕಾಸರಗೋಡು ತಾಲೂಕಿನಿಂದ ಯೋಗಪಟುಗಳು,ಮಕ್ಕಳು ಹಾಗೂ ಯೋಗೇತರರು ಸೇರಿದಂತೆ ಸುಮಾರು 3 ಸಾವಿರ ಮಂದಿ ಪಾಲ್ಗೊಂಡಿದ್ದರು. ಮಾನಸಿಕ ಸಿದ್ದತೆ, ಉಸಿರಾಟ ಕ್ರಿಯೆ ಸುಮನ ಸುರತ್ಕಲ್ ನಡೆಸಿದರು. ಚಿಕಿತ್ಸಾತ್ಮಕ ಅಭ್ಯಾಸವನ್ನು ವಲಯ ಸಂಚಾಲಕ ಅಶೋಕ ಜೈನ್, ಸೂರ್ಯನಮಸ್ಕಾರ ವಸಂತ ಪುತ್ತೂರು, ಅಮೃತಾಸನ ಹರಿಪ್ರಸಾದ್ ಪುತ್ತೂರು, ಕುಣಿತಭಜನೆಯನ್ನು ಧರಣೇಶ್ , ಗಂಗಾಧರ ಕಾವೂರು ನಡೆಸಿಕೊಟ್ಟರು.
ಕಾರ್ಯಕ್ರಮದ ಸಂಚಾಲಕ ದೇವದಾಸ ಮೀನಕಳಿಯ ವಂದಿಸಿದರು. ಶಿಕ್ಷಕಿ ಶಿಲ್ಪಾ ಸುರತ್ಕಲ್ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಯೋಗಪಟುಗಳು ಪಣಂಬೂರಿನ ಸಮುದ್ರ ಕಿನಾರೆಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿದರು.
ಪ್ರಾಂತ ಸಂಚಾಲಕರು ಸಂಘಟನಾ ವಿಭಾಗದ ಹರೀಶ್ ಕೋಟ್ಯಾನ್, ಪ್ರಶಿಕ್ಷಣ ವಿಭಾಗದ ಲಕ್ಷ್ಮಿ ನಾರಾಯಣ, ಪ್ರಾಂತ ಪ್ರತಿನಿಧಿ ಶಿವಾನಂದ ರೈ,ವಲಯ ಸಂಯೋಜಕರಾದ ಜಯರಾಮ ಉಳ್ಳಾಲ, ವಲಯ ಪ್ರಮುಖರಾದ ಪ್ರತಾಪ್ ರಾವ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಜಿಲ್ಲಾ ಸಂಯೋಜಕರಾದ ಕನಕ ಅಮೀನ್, ಜಿಲ್ಲಾ ಸಹ ಸಂಚಾಲಕರಾದ ಲೋಕೇಶ್ ಪೊಳಲಿ, ಗಣೇಶ್ ಸುವರ್ಣ, ಯೋಗೀಶ್ ಆಚಾರ್ಯ ಪುತ್ತೂರು, ಮಾಧುರಿ ವಿಟ್ಲ, ಅನಿತಾ,ಜಿಲ್ಲಾ ಪ್ರಮುಖರಾದ ಶಿವಪ್ರಸಾದ್ ಪೊಳಲಿ, ಗೀತಾ ಉಳ್ಳಾಲ, ಸುಬ್ರಹ್ಮಣ್ಯ ಭಟ್, ಅನುಪಮಾ, ಅಕ್ಷತ್, ಜಿಲ್ಲಾ ಮಾತೃ ಭೋಜನ ಪ್ರಮುಖರಾದ ಶೋಭ ಸುರತ್ಕಲ್, ಹರೀಶ್ ಅಂಚನ್, ಪ್ರಮುಖರಾದ ಈಶ್ವರ ಕೊಟ್ಟಾರಿ, ಸೂರಜ್, ಶ್ರೀಕಲ, ಗುರುರಾಜ್ ಶೆಟ್ಟಿ, ಸುಂದರ ಉಳ್ಳಾಲ, ಜನಾರ್ದನ ಪೊಳಲಿ ನಗರ, ಶ್ರೀನಿವಾಸ ಕಾವೂರು ನಗರ, ಶ್ಯಾಮಲಾ ಸುರತ್ಕಲ್ ನಗರ, ಕೃಷ್ಣಾನಂದ ಪುತ್ತೂರು, ಪ್ರೇಮಲತಾ ಬೆಳ್ತಂಗಡಿ, ಪ್ರಕಾಶ್ ಆನಡ್ಕ ವಿಟ್ಲ ತಾಲೂಕು, ಸುನಂದ ಸುಳ್ಯ, ನಾರಾಯಣ ನಾಯ್ಕ ಬಂಟ್ವಾಳ ತಾಲೂಕು, ಸಧ್ಯೋಜಾತ ಆಚಾರ್ಯ ಕಾಸರಗೋಡು ಜಿಲ್ಲೆ, ಪ್ರಭಾಕರ ಸುಬ್ರಮಣ್ಯ, ಬಾಲಕೃಷ್ಣ ಪುತ್ತೂರು, ನಗರ ಪ್ರಮುಖರಾದ ಕವಿತಾ, ಶೇಖರ , ಸಂಧ್ಯಾಶಣೈ, ರಾಘವೇಂದ್ರ ಶೆಟ್ಟಿ ತಡಂಬೈಲ್, ಅಶೋಕ ಕೃಷ್ಣಾಪುರ ,ಭರತ್ ಶೆಟ್ಟಿ ಕುಳಾಯಿ, ಜನಾರ್ಧನ್, ರೋಹಿಣೇಶ್, ರಘು , ಗಾಯತ್ರಿ, ರೂಪವಾಣಿ, ರಮೇಶ್, ಜನಾರ್ದನ ಸುರತ್ಕಲ್, ದಿನೇಶ್, ರಾಜೇಶ್ ಸುರತ್ಕಲ್, ಸುಧಾ ಮೀನಕಳಿಯ, ಗೀತಾ ಕಂಕನಾಡಿ, ಮಲ್ಲಿಕಾ ಕಾವೂರು, ಸ್ವಯಂ ಪ್ರಭಾ ಪುತ್ತೂರು, ಸೌಮ್ಯ ವಿಟ್ಲ ಹಾಗೂ ಇತರೆ ಜವಾಬ್ದಾರಿ ವಹಿಸಿರುವ ಎಲ್ಲಾ ಪ್ರಮುಖರುಗಳು ಹಾಗೂ ಎಲ್ಲಾ ನಗರ, ತಾಲೂಕು ಭಾಗದ ಯೋಗಬಂಧುಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
