ಮೂಡುಬಿದಿರೆ: ಆಶಾ ಮೀಡಿಯಾ ಹೌಸ್-ಬಿದಿರೆ ನ್ಯೂಸ್‌ನ ನೂತನ ಕಚೇರಿ ಉದ್ಘಾಟನೆ

ಮೂಡುಬಿದಿರೆ: ಆಶಾ ಮೀಡಿಯಾ ಹೌಸ್-ಬಿದಿರೆ ನ್ಯೂಸ್‌ನ ನೂತನ ಕಚೇರಿ ಉದ್ಘಾಟನೆ


ಮೂಡುಬಿದಿರೆ: ಆಶಾ ಮೀಡಿಯಾ ಹೌಸ್ ಅಡಿಯಲ್ಲಿ ಕಾರ್ಯನಿರ್ವಹಿಸಲಿರುವ ಮೂಡುಬಿದಿರೆಯ ಸಮಗ್ರ ಸುದ್ದಿತಾಣ 'ಬಿದಿರೆ ನ್ಯೂಸ್' ಹಾಗೂ 'ಆಶಾ ವೆಬ್ ಸ್ಟುಡಿಯೋ' ಇದರ ನೂತನ ಕಚೇರಿಯು ಶನಿವಾರ ಕಾರ್ಯಾರಂಭಗೊಂಡಿತು. ಮೂಡುಬಿದಿರೆ ಪೊನ್ನೆಚ್ಚಾರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿ ಇರುವ ವಿಶ್ವಾಸ್ ಪಾರಡೈಸ್ ವಾಣಿಜ್ಯ ಸಂಕೀರ್ಣದಲ್ಲಿ ಈ ಹೊಸ ಕಚೇರಿ ಸ್ಥಾಪಿತವಾಗಿದೆ.

ನೂತನ ಕಚೇರಿಯ ಉದ್ಘಾಟನಾ ಸಂದರ್ಭದಲ್ಲಿ ಅರ್ಚಕ ಗುರು ಭಟ್ ಅವರು ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಜಯಾನಂದ ಬಂಗೇರ, ಸುಹಾನ್ ಜೆ. ಬಂಗೇರ ಹಾಗೂ ಪ್ರಧಾನ ಸಂಪಾದಕ ಯಶೋಧರ ವಿ. ಬಂಗೇರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸಿಬ್ಬಂದಿ ವರ್ಗ ಹಾಗೂ ಹಿತೈಷಿಗಳು ಪಾಲ್ಗೊಂಡು ನೂತನ ಸಂಸ್ಥೆಗೆ ಯಶಸ್ಸು ಕೋರಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article