ನಾನು ಕುಕ್ಕೇ ದೇವರ ಭಕ್ತ: ಎಚ್.ಡಿ. ದೇವೇಗೌಡ
ಅದೇ ರೀತಿ ಸೋಮವಾರ ನಾನು ನನ್ನ ೯೩ನೇ ವಯಸ್ಸಿನಲ್ಲಿ ೯೧ ಕೆಜಿ ತೂಕದಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿಯಲ್ಲಿ ತುಲಾಭಾರ ಸೇವೆ ಮಾಡಿಸಿದ್ದೇನೆ ಎಂದು ಅವರು ಸೋಮವಾರ ಆದಿಶೇಷ ವಿವಿಐಪಿ ವಸತಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅನ್ನದಾನಕ್ಕೆ ದೇಣಿಗೆ ನೀಡಿದ ಮಾಜಿ ಪ್ರಧಾನಿ:
ಅನ್ನದಾನವೆಂಬುದು ಶೇಷ್ಠ ದಾನವೆಂಬಂತೆ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕೆ ದೇಣಿಗೆಯನ್ನು ಮಾಜಿಪ್ರಧಾನಿ ಹೆಚ್.ಡಿ. ದೇವೇಗೌಡರು ದೇಣಿಗೆ ನೀಡಿದರು.
ಯುವ ಜನಾಂಗ ಕೃಷಿಯಲ್ಲಿ ತೊಡಗಿಸಿಕೊಳ್ಳಲಿ:
ಇಂದಿನ ಯುವ ಜನಾಂಗವು ಐಟಿ, ಬಿಟಿ ಎಂದು ಉದ್ಯೋಗ ಅರಸುತ್ತ ದೂರದ ನಗರಗಳಿಗೆ ಹಾಗೂ ಹೊರ ರಾಷ್ಟ್ರಗಳಿಗೆ ಹೋಗುವ ಬದಲು ತಮ್ಮ ಊರಿನಲ್ಲಿ ಕೃಷಿಯ ಬಗ್ಗೆ ಒಲವು ತೋರಿಸಿ ಕೃಷಿಯನ್ನು ಅಭಿವೃಧಿಪಡಿಸಿ ಹೆಚ್ಚಿನ ಆದಾಯವನ್ನು ಪಡೆಯುವಂತಾಗಬೇಕು ಈ ನಿಟ್ಟಿನಲ್ಲಿ ನಮ್ಮ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಇಂದಿನ ಯುವ ರಾಜಕಾರಣಿಗಳಿಗೆ ಮಾಜಿ ಪ್ರಧಾನಿಯವರಿಂದ ಸಲಹೆ:
ಈ ಹಿಂದಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಬಹಳ ವಾತ್ಯಾಸವಿದೆ ಈಗಿನ ಯುವ ರಾಜಕಾರಣಿಗಳಿಗೆ ನನ್ನ ಸಲಹೆ ಏನೆಂದರೆ ತಾವು ತಮ್ಮ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವುದು ಬಹಳ ಮುಖ್ಯ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉಪಕಾರ ಮನೋಭಾವವನ್ನು ಬೆಳೆಸಿಕೊಂಡು ಸಮಾಜದಲ್ಲಿಶಾಂತಿಕಾಪಾಡುವಲ್ಲಿ ಶ್ರಮವಹಿಸುವಂತವರಾಗಬೇಕು ಎಂದರು.
ಈ ಸಂಧರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಎಸ್.ಎನ್. ಮನ್ಮಥ, ಎಮ್.ಬಿ. ಸದಾಶವ, ಜಾಕೆ ಮಾಧವಗೌಡ, ಕೇನ್ಯ ರವೀಂದ್ರ ಶೆಟ್ಟಿ, ಕುಂಟಿಕಾನ ಲಕ್ಷ್ಮಣ ಗೌಡ, ಯೂತ್ ಅಧ್ಯಕ್ಷರಾದಂತಹ ಅಕ್ಷಿತ್ ಸುವರ್ಣ, ಮಂಜುನಾಥ್ ಕಾಟೂರ್, ದೇವಿ ಪ್ರಸಾದ್ ಶೆಟ್ಟಿ ಕೊಕ್ಕಡ, ಡಾ. ಅಮರಶ್ರೀ ಶೆಟ್ಟಿ ಮೂಡಬಿದ್ರೆ ಹಾಗೂ ಕುಕ್ಕೇ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮೀತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಪ್ರವೀಣ ರೈ ಹಾಗೂ ಕಾರ್ಯನಿರ್ವಹಣಾಧಿಕಾರಿ ಅಯ್ಯಪ್ಪ ಸುತಗುಂಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೇಂದ್ರ ಎನ್.ಡಿ.ಎ ಸರಕಾರದ ಜೊತೆ ಮುಂದುವರಿಕೆ:
ಕೇಂದ್ರ ಸರಕಾರವು ಹಲವು ಮಿತ್ರ ಪಕ್ಷಗಳೊಂದಿಗೆ ಎನ್.ಡಿ.ಎ.ಯಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಷ್ಟ್ರದಲ್ಲಿ ಉತ್ತಮ ಜನಪರ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದ್ದು ಶ್ಲಾಘನೀಯ ವಿಷಯ. ನಮ್ಮ ಜೆ.ಡಿ.ಎಸ್-ಎನ್.ಡಿ.ಎ ಜೊತೆಗಿದ್ದು ಮುಂದಿನ ದಿನಗಳಲ್ಲಿ ಜೊತೆ ಜೊತೆಯಾಗಿ ಸಾಗಲಿದ್ದೇವೆ. ಆದ್ದರಿಂದ ನಮ್ಮ ಮೈತ್ರಿ ನಿರಾತಂಕ. ಮತ್ತು ನರೇಂದ್ರ ಮೋದಿಯವರು ಒಳ್ಳೆಯ ಒಬ್ಬ ನಾಯಕನಾಗಿ ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಪ್ರಪಂಚದಲ್ಲಿ ದೇಶ ದೇಶದ ಬಗ್ಗೆ ಯಾವುದೇ ಬಿಕ್ಕಟ್ಟು ಇದ್ದರೂ ಬಗೆಹರಿಸುವ ನಾಯಕನಾಗಿ ಗುರುತಿಸಿ ಕೊಂಡಿದ್ದಾರೆ.
ಇದನ್ನು ಈಗಿನ ಯುವ ಜನರು ಮೋದಿಯವರ ಕಾರ್ಯವೈಖರಿ ಮತ್ತು ಅವರು ದೇಶದ ಒಳಿತಿಗೋಸ್ಕರ ಮಾಡುವಂತಹ ಉತ್ತಮ ಕಾರ್ಯಗಳನ್ನು ಮನದಟ್ಟು ಮಾಡಿ ಕೊಳ್ಳುವುದು ಬಹಳ ಮುಖ್ಯವೆಂದರು. ಈ ಹಿಂದೆ ರಾಜ್ಯದಲ್ಲಿ ನಮ್ಮದೇ ಜೆ.ಡಿ.ಎಸ್ ಸರಕಾರವಿದ್ದ ಸಂಧರ್ಭದಲ್ಲಿ ಅನೇಕಜನಪರ ಯೋಜನೆಗಳನ್ನು ತಂದಿದ್ದು, ಇದರ ಸಂಪೂರ್ಣ ಫಲಸಿಗುವಂತೆ ನಮ್ಮ ಸರಕಾರವು ಬಹಳ ಪ್ರಾಮಾಣಿಕವಾಗಿ ಶ್ರಮಿಸಿದೆ ಎಂಬುದು ತುಂಬಾ ಖುಷಿಯ ವಿಚಾರ ಎಂದು ದೇವೇಗೌಡರು ತಿಳಿಸಿದರು.