ಮಾಜಿ ಸೈನಿಕನಿಗೆ ಜೀವ ಬೆದರಿಕೆ
Saturday, April 18, 2026
ಬಂಟ್ವಾಳ: ಮಾಜಿ ಸೈನಿಕನೋರ್ವನ ಮನೆಯಂಗಳಕ್ಕೆ ನಾಲ್ವರು ವ್ಯಕ್ತಿಗಳು ಅಕ್ರಮ ಪ್ರವೇಶಗೈದು ಕೊಲೆ ಬೆದರಿಕೆ ಒಡ್ಡಿರುವ ಘಟನೆ ಬಂಟ್ವಾಳ ತಾ.ನ ನಾವೂರ ಗ್ರಾಮದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಸಜಂಕಬೆಟ್ಟು ನಿವಾಸಿ ಮಾಜಿ ಸೈನಿಕ ಎಸ್. ಪುಷ್ಪರಾಜ್ ಅವರಿಗೆ ಕೊಲೆ ಬೆದರಿಕೆ ಒಡ್ಡೊರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವೂರ ನಿವಾಸಿಗಳಾದ ವಿಜಯ್, ಸಿರಿಲ್ ಹಾಗೂ ಇಬ್ಬರು ಅಪರಿಚಿತರು ಇನ್ನೋವಾ ಕಾರಿನಲ್ಲಿ ಅಗಮಿಸಿ ಮಾಜಿ ಸೈನಿಕನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು, ತಲವಾರು ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಹೇಳಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.