ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಎ.28 ರಂದು ಸಂಜೆ ‘ಜನಾಂದೋಲನ ನಡಿಗೆ’

ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಎ.28 ರಂದು ಸಂಜೆ ‘ಜನಾಂದೋಲನ ನಡಿಗೆ’

ಬಂಟ್ವಾಳ: ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಎ.28 ರಂದು ಸಂಜೆ 4 ರಿಂದ ‘ಜನಾಂದೋಲನ ನಡಿಗೆ’ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿ.ಸಿ. ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ವರೆಗೆ ಜನಾಂದೋಲನ ನಡಿಗೆ ಜಾಥಾ ಸಂಪನ್ನಗೊಳ್ಳಲಿದೆ.

ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇನ್ನು ಮತ್ತಷ್ಟು ವರ್ಷ ಸಂಗ್ರಹ ಮುಂದುವರಿಸಲು ಪಣತೊಟ್ಟಿದೆ. ಸ್ಥಳೀಯ ವಾಹನಗಳಿಗೆ ನೀಡುತ್ತಿದ್ದ ಉಚಿತ ಓಡಾಟದ ಅವಕಾಶವನ್ನು ಇದೀಗ ರದ್ದುಗೊಳಿಸಲಾಗಿದೆ. ಅಲ್ಲದೆ ಬ್ರಹ್ಮರ ಕೂಟ್ಲುವಿನಿಂದ 30 ಕಿ.ಮೀ. ದೂರದ ವಳಾಲು, 27 ಕಿ.ಮೀ. ದೂರದ ಪಣಕಜೆ, 32 ಕಿ.ಮೀ. ದೂರದ ಗಂಜಿಮಠದಲ್ಲಿ ಹೊಸ ಟೋಲ್ ಬೂತ್‌ಗಳನ್ನು ತೆರೆಯಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ ಎಂದು ಸಮಿತಿ ದೂರಿದೆ.

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಗೊಳಿಸಬೇಕು, ಜಿಲ್ಲೆಯ ಹೆದ್ದಾರಿಗಳಲ್ಲಿ ಹೊಸ ಟೋಲ್ ಗೇಟ್‌ಗಳ ಸ್ಥಾಪನೆಯನ್ನು ಕೈಬಿಡಬೇಕು. ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಲಾಗುತ್ತದೆ ಎಂದು ಹೋರಾಟ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು, ವಾಹನ ಚಾಲಕ, ಮಾಲಕರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕೋರಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article