ಪೊಳಲಿ ಅಮ್ಮನ ದರ್ಶನ ಪಡೆದ ಹೈಕೋಟ್೯ ನ್ಯಾಯಮೂರ್ತಿ
Saturday, April 4, 2026
ಬಂಟ್ವಾಳ: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ ನಡೆಯುತ್ತಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಶನಿವಾರ ಶ್ರೀ ಕ್ಷೇತ್ರ ಪೊಳಲಿಗೆ ಬೇಟಿ ನೀಡಿ ದೇವರ ದರ್ಶನ ಪಡೆದರು.
ದೇವಳದ ಅರ್ಚಕರಾದ ಅನಂತಪದ್ಮನಾಭ ಭಟ್ ಅವರು ನ್ಯಾಯಾಧೀಶರಿಗೆ ದೇವರ ಪ್ರಸಾದವನ್ನಿತ್ತು ಕ್ಷೇತ್ರದ ಐತಿಹ್ಯ ಸಹಿತ ಸಂಪೂರ್ಣ ಮಾಹಿತಿ ನೀಡಿದರು.
ದೇವಳದ ಅರ್ಚಕ ಆದರ್ಶ ಭಟ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರಮೋಹನ್, ಮಾಜಿ ಧಾರ್ಮಿಕಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಪೊಳಲಿಯಲ್ಲಿ ಈ ಬಾರಿ 29 ದಿನಗಳ ಜಾತ್ರಾಮಹೋತ್ಸವ ನಡೆಯಲಿದ್ದು, ಶುಕ್ರವಾರ ರಾತ್ರಿನವೀಲು ರಥ ನಡೆದಿತ್ತು. ಸೋಮವಾರದಿಂದ ಐತಿಹಾಸಿಕ ಹಿನ್ನಲೆಯನ್ನೊಳಗೊಂಡ ಪೊಳಲಿ ಚೆಂಡು ಆರಂಭವಾಗಲಿದೆ.