ಜಿಮ್‌ಗಳಲ್ಲಿ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಘಟನೆಗೆ ಕಠಿಣ ಕ್ರಮಕ್ಕೆ ಒತ್ತಾಯ

ಜಿಮ್‌ಗಳಲ್ಲಿ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಘಟನೆಗೆ ಕಠಿಣ ಕ್ರಮಕ್ಕೆ ಒತ್ತಾಯ


ಬಂಟ್ವಾಳ: ಹುಬ್ಬಳ್ಳಿಯ ಫಿಟ್ನೆಸ್ ಜಿಮ್‌ನಲ್ಲಿ ನಡೆದಿರುವ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಪ್ರಕರಣವು ರಾಜ್ಯದಾದ್ಯಂತ ಆತಂಕಕ್ಕೆ ಕರಣವಾಗಿದ್ದು, ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗಿಳ್ಳುವಂತೆ ಆಗ್ರಹಿಸಿ ಬಂಟ್ವಾಳ ತಹಶೀಲ್ದಾರರ ಮೂಲಕ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿತು.

ಹಿಂದೂ ಜನಜಾಗೃತಿ ಸಮಿತಿ ಮತ್ತು ರಣರಾಗಿಣಿ ಶಾಖೆಯ ಪದಾಧಿಕಾರಿಗಳ ನಿಯೋಗ ಸೋಮವಾರಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಪ್ರಕರಣ ಆರೋಪಿಗಳಾದ ಸಮೀರ್ ಮುಲ್ಲಾ ಮತ್ತು ಅವನ ಸಹೋದರಿ ತೈಸೀಮ್ ಮುಲ್ಲಾ ಅವರ ವಿರುದ್ದ ಕಠಿಣವಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಈ ಪ್ರಕರಣದ ತನಿಖೆಗೆ ವಿಶೇಷ  ದಳವನ್ನು ರಚಿಸಬೇಕು, ಕೋಕಾ, ಪೋಕ್ಸೋ, ಅತ್ಯಾಚಾರ, ವಸೂಲಿ, ಐಟಿ ಕಾಯ್ದೆ ಮತ್ತು ಕರ್ನಾಟಕದ ಮತಾಂತರ ವಿರೋಧಿ ಕಾಯ್ದೆಗಳಡಿ ಕೇಸು ದಾಖಲಿಸಬೇಕಲ್ಲದೆ ಫಾಸ್ಟ್ ಟ್ರ್ಯಾಕ್ ಕೋರ್ಟನಲ್ಲಿ ಆರೋಪಿಗಳ ವಿಚಾರಣೆ ನಡೆಸಬೇಕು.

ಸಂಬಂಧಿತ ಜಿಮ್ ಅನ್ನು ಸೀಲ್ ಮಾಡಬೇಕು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎಲ್ಲಾ ಜಿಮ್‌ಗಳಲ್ಲಿ ಟ್ರೈನರ್‌ಗಳ ಪರಿಶೀಲನೆ, ಸಿಸಿಟಿವಿ ವ್ಯವಸ್ಥೆ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆಗಳಿರುವುದನ್ನು ಖಚಿತಪಡಿಸಬೇಕು.

ಎಲ್ಲಾ ಜಿಮ್ ಸಿಬ್ಬಂದಿಗೆ ಪೊಲೀಸ್ ವರಿಫಿಕೇಶನ್ ಕಡ್ಡಾಯಗೊಳಿಸಿ, ಮಹಿಳಾ ವಿಭಾಗಗಳಿಗೆ ಮಹಿಳಾ ತರಬೇತುದಾರರನ್ನು ನೇಮಕ ಮಾಡಬೇಕು ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಬೇಕು.

ರಾಜ್ಯ ಮಹಿಳಾ ಆಯೋಗವು ಕೂಡಲೇ ಮಧ್ಯಪ್ರವೇಶಿಸಿ, ಪ್ರಕರಣದ ತನಿಖೆ ಮಾಡಬೇಕು. ಉತ್ತರ ಪ್ರದೇಶದಲ್ಲಿ ಕೈಗೊಂಡಿರುವಂತೆ (ಜಿರೋ ಟಾಲರೆನ್ಸ್) ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ಥ ಮಹಿಳೆಯ ಗೌಪ್ಯತೆ ಕಾಪಾಡಿ, ಆಕೆಗೆ ಸರಕ್ಷತೆಯನ್ನು ನೀಡಬೇಕು. ಆಕೆಗೆ ಸಂಬಂದಿಸಿದ ವಿಡಿಯೋ ಎಲ್ಲಿಯೂ ಬಿಡುಗಡೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಲ್ಲಿಪಾದೆ ದುಗಲಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಅನುಷಾ, ಗೀತಾ ಪದ್ಮನಾಭ, ಯಜ್ಞಶ್ರೀ, ವಿನೋದ, ನಾಗವೇಣಿ, ಅಂಕಿತ, ಗೀತಾ ಯೋಗೀಶ್, ಮಮತಾ, ಸುನೀತಾ ಹರೀಶ್, ಸೋಮನಾಥ್ ಸಾಲ್ಯಾನ್, ಹಿಂದೂ ಮುಖಂಡರಾದ ಚಂದ್ರಹಾಸ ಮೆಂಡನ್ ಪುನೀತ್ ಕಲ್ಲಡ್ಕ, ನಾರಾಯಣ, ರಾಧಾ ಕೃಷ್ಣ ಮತ್ತಿರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article