ಮೇ. 10ರಂದು ಅಪೆಕ್ಸ್ ರನ್ 2026 ಮ್ಯಾರಥಾನ್

ಮೇ. 10ರಂದು ಅಪೆಕ್ಸ್ ರನ್ 2026 ಮ್ಯಾರಥಾನ್


ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಮಗಳೂರು, ಐಸಿವೈಎಂ ಮಂಗಳೂರು ಡಯಸಿಸ್ ಹಾಗೂ ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ಮೇ 10ರಂದು ಬೆಳಗ್ಗೆ ೫ ಗಂಟೆಗೆ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಅಪೆಕ್ಸ್ ರನ್ 2026 ಮ್ಯಾರಥಾನ್ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ರೆ.ಫಾ. ಡಾ. ಆಲ್ವಿನ್ ಸೆರಾವೊ ತಿಳಿಸಿದರು.

ಅವರು ಇಂದು ನಗರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಈ ಮ್ಯಾರಥಾನ್ ದೈಹಿಕ ಕ್ಷಮತೆ, ಆರೋಗ್ಯ ಜಾಗೃತಿ, ಯುವಜನರ ಭಾಗವಹಿಸುವಿಕೆ, ಸಮುದಾಯದ ಒಗ್ಗಟ್ಟು, ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದು, 2,500 ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.


ಮೂರು ವಿಧದ ಮ್ಯಾರಥಾನ್ ಆಯೋಜಿಸಿದ್ದು, 3 ಕಿ.ಮೀ. ಓಟ, 5 ಕಿ.ಮೀ. ಓಟ ಹಾಗೂ 10 ಕಿ.ಮೀ. ಓಟ ಆಯೋಜಿಸಲಾಗಿದೆ. ಮೂರು ಕಿ.ಮೀ. ಮ್ಯಾರಥಾನ್ ನಲ್ಲಿ ಭಾಗವಹಿಸುವವರು 250 ರೂ. ನೋಂದಣಿ ಶುಲ್ಕ, 5 ಕಿ.ಮೀ.ನಲ್ಲಿ ಭಾಗವಹಿಸುವವರು 350 ರೂ. ನೋಂದಣಿ ಶುಲ್ಕ ಹಾಗೂ 10 ಕಿ.ಮೀ.ನಲ್ಲಿ ಭಾಗವಹಿಸುವವರು 450 ರೂ. ನೋಂದಣಿ ಶುಲ್ಕ ಪಾವತಿಸಬೇಕು.  mxrun2026 ಗೆ ಭೇಟಿ ನೀಡಿ ಅಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು, ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. 3 ಕಿ.ಮೀ.ನಲ್ಲಿ ಭಾಗವಹಿಸುವವರಿಗೆ ಟಿ-ಶರ್ಟ್, ಬಿಬ್ ಸಂಖ್ಯೆ, ಫಿನಿಷರ್ ಪದಕ, ಉಪಹಾರ, ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡಲಾಗುವುದು. 5 ಕಿ.ಮೀ. ಹಾಗೂ 10 ಕಿ.ಮೀ.ನಲ್ಲಿ ಭಾಗಬಹಿದುವವರಿಗೆ ತಲಾ ಪ್ರಥಮ ಬಹುಮಾನ 5,000 ಮತ್ತು ಟ್ರೋಫಿ, ದ್ವಿತೀಯ ಬಹುಮಾನ 3,000 ಮತ್ತು ಟ್ರೋಫಿ ನೀಡಲಾಗುವುದು ಎಂದರು.

ಈ ಮ್ಯಾರಥಾನ್ ನಲ್ಲಿ ಇನ್ಸ್ರಗ್ರಾಂನಲ್ಲಿ ಅತಿ ಹೆಚ್ವು ವೀಕ್ಷಣೆ ಪಡೆದ ರೀಲ್ಸ್ ಗೆ 10,000 ರೂ. ನಗದುವಬಹುಮಾನ ನೀಡಲಾಗುವುದು ಎಂದ ಅವರು ಈಗಾಗಲೇ ಬೆಂಗಳೂರು ಮತ್ತು ಮೈಸೂರು ರನ್ನರ್ಸ್ ಕ್ಲಬ್ ನಿಂದ ನೋಂದಣಿ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಈ ಮ್ಯಾರಥಾನ್ ನಲ್ಲಿ ಮಾರ್ಗ ನಿರ್ವಹಣೆ, ನೀರಿನ ವ್ಯವಸ್ಥೆ, ಸ್ವಯಂ ಸೇವಕರ ಸಹಾಯ, ವೈದ್ಯಕೀಯ ನೆರವು, ಆಂಬ್ಯುಲೆನ್ಸ್ ಸೇವೆ ಹಾಗೂ ಭದ್ರತಾ ವ್ಯವಸ್ಥೆಯನ್ನು ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಪೆಕ್ಸ್ 2026 ಇದರ ಸಂಯೋಜಕ ಕ್ಲೈಡ್ ಡಿಸೋಜಾ, ಐಸಿಎಂ ಮಂಗಳೂರು ಡಯಾಸಿಸ್ ಇದರ ಅಧ್ಯಕ್ಷ ವಿಜೊಯ್ ಕರ್ಡೊಝ್, ಕಾರ್ಯದರ್ಶಿ  ಮರಿಯ ಡಿ ಸಿಲ್ವಾ, ಜೊತೆ ಕಾರ್ಯದರ್ಶಿ ಫ್ಲಾಯ್ಡ್ ಪಿಂಟೋ, ಉಪನ್ಯಾಸಕರಾದ ಡೆನ್ಸಿಲ್ ಡಿಕೋಸ್ಟಾ, ಮಮತಾ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article