ಜೆಇಇ ಮೈನ್ಸ್ ಪರೀಕ್ಷೆ: ಎಕ್ಸ್‌ಪರ್ಟ್ ಪಿಯು ಕಾಲೇಜಿನ 19 ವಿದ್ಯಾರ್ಥಿಗಳಿಗೆ 99 ಪರ್ಸೆಂಟೈಲ್‌ಗಿಂತ ಅಧಿಕ

ಜೆಇಇ ಮೈನ್ಸ್ ಪರೀಕ್ಷೆ: ಎಕ್ಸ್‌ಪರ್ಟ್ ಪಿಯು ಕಾಲೇಜಿನ 19 ವಿದ್ಯಾರ್ಥಿಗಳಿಗೆ 99 ಪರ್ಸೆಂಟೈಲ್‌ಗಿಂತ ಅಧಿಕ


ಮಂಗಳೂರು: ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಒಟ್ಟು 19 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದು, ಅಂಕಿತ್ ಅಶೋಕ್ ದೊಡವಾಡ ಫಿಸಿಕ್ಸ್‌ನಲ್ಲಿ 100 ಪರ್ಸೆಂಟೈಲ್ ಪಡೆದಿದ್ದಾರೆ.

2026ರ ಮಾರ್ಚ್‌ನಲ್ಲಿ ನಡೆದ ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ 57 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಅಧಿಕ, 93 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಅಧಿಕ, 130 ವಿದ್ಯಾರ್ಥಿಗಳು 96 ಪರ್ಸೆಂಟೈಲ್‌ಗಿಂತ ಅಧಿಕ, 166 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ ಹಾಗೂ 377 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ. ಈ ಮೂಲಕ ೪೪೮ ವಿದ್ಯಾರ್ಥಿಗಳು ಜೆಇಇ ಎಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಂಡಿದ್ದಾರೆ.

99.7084298 ಪರ್ಸೆಂಟೈಲ್ ಪಡೆದ ಸುಹಾಸ ಬಸನಗೌಡ ಬಾಳನಗೌಡರ್‌ಗೆ ಅಖಿಲ ಭಾರತ ಮಟ್ಟದ ಸಾಮಾನ್ಯ ವಿಭಾಗದಲ್ಲಿ 4758ನೇ ರ‍್ಯಾಂಕ್, 99.7084298 ಪರ್ಸೆಂಟೈಲ್ ಪಡೆದ ಅಂಕಿತ್ ಅಶೋಕ್ ದೊಡವಾಡ 4773ನೇ ರ‍್ಯಾಂಕ್, 99.6272345 ಪರ್ಸೆಂಟೈಲ್ ಪಡೆದ ಕೃತಿಕಾ ಮಲ್ಲಿಕಾರ್ಜುನ್ ಪಾಟೀಲ್‌ಗೆ  6076ನೇ ರ‍್ಯಾಂಕ್, 99.5991624 ಪರ್ಸೆಂಟೈಲ್ ಪಡೆದ ಉದ್ದಂಡಿ ಲಕ್ಷ್ಮೀ ಮೇಘನಾ 6508ನೇ ರ‍್ಯಾಂಕ್, 99.5031775 ಪರ್ಸೆಂಟೈಲ್ ಪಡೆದ ಸಮಯ ಎ.ಎಸ್. 8024ನೇ ರ‍್ಯಾಂಕ್, 99.4979736 ಪರ್ಸೆಂಟೈಲ್ ಪಡೆದ ಮಿಲನ್ ಮಾದೇಶ ಎಸ್. 8138ನೇ ರ‍್ಯಾಂಕ್, 99.4162842 ಪರ್ಸೆಂಟೈಲ್ ಪಡೆದ ಡಿ.ನವನೀತ್ ಎನ್.ಪೈ 8962ನೇ ರ‍್ಯಾಂಕ್, 99.4228625 ಪರ್ಸೆಂಟೈಲ್ ಪಡೆದ ಉಜ್ವಲ್ ಶಿವಾನಂದ್ ಬೂದಿಹಾಳ್ 9293ನೇ ರ‍್ಯಾಂಕ್,  99.4228625 ಪರ್ಸೆಂಟೈಲ್ ಪಡೆದ ಎಂ.ದೀಪಕ್ ಗೌಡ ಎಂ. 9291ನೇ ರ‍್ಯಾಂಕ್, 99.4130510 ಪರ್ಸೆಂಟೈಲ್ ಪಡೆದ ಸಾಯಿ ಶೋಬಿತ್ ಎಸ್. 9521ನೇ ರ‍್ಯಾಂಕ್, 99.4130510 ಪರ್ಸೆಂಟೈಲ್ ಪಡೆದ ಅಭಿಷೇಕ್ ಆರ್. ಹನಮಂತಗೌಡರ  9516ನೇ ರ‍್ಯಾಂಕ್ ಪಡೆದಿದ್ದಾರೆ.

ಅರಳೆ ವಿರೂಪಾಕ್ಷ (99.3650938 ಪರ್ಸೆಂಟೈಲ್), ನರೇನ್ ವಿ. (99.3416964), ನಿತೀಶ್ ಗೋಪಾಲ್ (99.3347760), ಯಶಸ್ ಎನ್.ಎಂ. (99.3303251), ಸಮರ್ಥ್ ಗೌಡ ಆರ್. (99.2905252), ರಿಷಿಕಾ ಕೆ.ಎಸ್. (99.2556385), ಚಂದನ್ ಎಚ್.ಆರ್. (99.1793285), ನಂದನ್ ನಾಯಕ್ (99.1756042) ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.

ಮೊದಲ ಹಂತದ ಪರೀಕ್ಷೆ ಜನವರಿಯಲ್ಲಿ ನಡೆದಿದ್ದು, ಮಾರ್ಚ್ ತಿಂಗಳಿನಲ್ಲಿ ಎರಡನೇ ಪರೀಕ್ಷೆ ನಡೆದಿರುತ್ತದೆ. ಈ ಎರಡೂ ಪರೀಕ್ಷೆಯಲ್ಲಿ ಪಡೆದ ಉತ್ತಮ ಅಂಕವನ್ನು ಪರಿಗಣಿಸಿ, ಅಂತಿಮವಾಗಿ ಈ ಫಲಿತಾಂಶ ಹಾಗೂ ರ‍್ಯಾಂಕ್ ಘೋಷಿಸಲಾಗಿದೆ. ಐಐಟಿ, ಎನ್‌ಐಟಿ ಸೇರಿದಂತೆ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಈ ಪರೀಕ್ಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸಲಾಗುತ್ತದೆ. ಈ ಎಲ್ಲಾ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article