ಖಾಸಗಿ ವಾಹನದಲ್ಲಿ ಶಾಲಾ ಮಕ್ಕಳ ಸಾಗಾಟ: ಕ್ರಮಕ್ಕೆ ಆಗ್ರಹ
ನಗರದ ಪತ್ರಿಕಾಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿ, ಖಾಸಗಿ (ವೈಟ್ ಬೋರ್ಡ್) ವಾಹನದ ಚಾಲಕರು, ಮಾಲಕರು ನಿಯಮ ಮೀರಿ ಮಕ್ಕಳನ್ನು ಖಾಸಗಿ ಕರೆದುಕೊಂಡು ಹೋಗುತ್ತಿದ್ದಾರೆ ಇದು ಅಪಾಯಕಾರಿಯಾಗಿದೆ. ತ್ರಾಸಿಯಲ್ಲಿ ಕೆಲ ವರ್ಷದ ಹಿಂದೆ ಖಾಸಗಿ ವಾಹನದಲ್ಲಿ ವಿದ್ಯಾರ್ಥಿಗಳನ್ನು ಸಾಗಾಟ ಮಾಡಿದ ಸಂದರ್ಭ ದುರ್ಘಟನೆಯಾಗಿತ್ತು. ಈ ಸಂದರ್ಭ ಮಕ್ಕಳಿಗೂ ಸಮರ್ಪಕವಾದ ಪರಿಹಾರವೂ ಸಿಕ್ಕಿಲ್ಲ. ಇಂತಹ ಘಟನೆಗಳು ನಮ್ಮ ಕಣ್ಣ ಮುಂದಿದ್ದರೂ ಮಂಗಳೂರು ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ವಾಹನ ಸಂಚಾರ ನಿಯಮಗಳನ್ನೇ ಉಲ್ಲಂಘಿಸಿ ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದರು.
ಟೂರಿಸ್ಟ್ ವಾಹನಗಳ ಮಾಲಕರು ದುಬಾರಿ ತೆರಿಗೆ, ಇನ್ಸೂರೆನ್ಸ್ ಸೇರಿದಂತೆ ಸುಮಾರು 23 ಸಾವಿರ ರೂ. ಕಟ್ಟಿ ವಾಹನ ಓಡಿಸುತ್ತಾರೆ. ಸರಕಾರದ ನಿರ್ದೇಶನದಂತೆ ಪ್ಯಾನಿಕ್ ಬಟನ್‌ಗಾಗಿ 14 ಸಾವಿರ ರೂ. ಕಟ್ಟಬೇಕಾಗಿದೆ. ಆದರೆ ಖಾಸಗಿ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಗಲಿ, ದುಬಾರಿ ಇನ್ಸೂರೆನ್ಸ್ ಆಗಲಿ, ಯಾವುದೇ ರೀತಿಯ ತೆರಿಗೆಗಳನ್ನು ಪಾವತಿಸದೆ ಬಾಡಿಗೆ ಆಧಾರದಲ್ಲಿ ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಸ್ಥಾಪನಾಧ್ಯಕ್ಷ ಮೋಹನ್ ಕುಮಾರ್ ಅತ್ತಾವರ, ಕಾರ್ಯಾಧ್ಯಕ್ಷ ಕಿರಣ್ ಲೇಡಿಹಿಲ್, ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುರತ್ಕಲ್ ಉಪಸ್ಥಿತರಿದ್ದರು.