ಮೂಡುಬಿದಿರೆ: ಮುಕ್ಕಾಲ್ದಿ ಪೂವಪ್ಪ ಶೆಟ್ಟಿ ನಿಧನ
Thursday, April 16, 2026
ಮೂಡುಬಿದಿರೆ: ಕೊಡಮಣಿತ್ತಾಯ ದೈವದ ಹಿರಿಯ ಮುಕ್ಕಾಲ್ದಿ ಕರಿಂಜೆ ಪೂವಪ್ಪ ಶೆಟ್ಟಿ (90)ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಕೆಲ್ಲಪುತ್ತಿಗೆಯಲ್ಲಿರುವ ತನ್ನ ಮಗಳ ಮನೆಯಲ್ಲಿ ನಿಧನ ಹೊಂದಿದರು.
ಕರಿಂಜೆ ಗುತ್ತು ಮನೆತನಕ್ಕೆ ಸಂಬಂಧಿಸಿದ ಕೊಡಮಣಿತ್ತಾಯ ಕ್ಷೇತ್ರದ ಬಿನ್ನಾಣಿ ಸೀಮೆಯ ದೈವದ ಮುಕ್ಕಾಲ್ದಿಯಾಗಿ ಪಟ್ಟಿ ಸ್ವೀಕರಿಸಿದ್ದ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅನೇಕ ಕೊಡಮಣಿತ್ತಾಯ ದೈವಸ್ಥಾನ ಹಾಗೂ ಕೊಡಮಣಿತ್ತಾಯ ಕ್ಷೇತ್ರಗಳಲ್ಲಿ ಮುಕಾಲ್ದಿಯಾಗಿ ಸುಮಾರು 6 ದಶಕಗಳ ಕಾಲ ಸೇವೆ ಸಲ್ಲಿಸಿ ಪ್ರಸಿದ್ಧಿ ಪಡೆದಿದ್ದರು.
ದೈವದ ಕಟ್ಟುಕಟ್ಟಳೆಗಳನ್ನು ನಿಯತ್ತಿನಿಂದ ಪಾಲಿಸಿಕೊಂಡು ಬಂದಿದ್ದ ಅವರು ಮುಕ್ಕಾಲ್ದಿಯಾಗಿ ನೀಡುತ್ತಿದ್ದ ದೈವದ ನುಡಿ ಭಕ್ತರ ಪಾಲಿಗೆ ಅಷ್ಟೇ ಪ್ರಭಾವಶಾಲಿಯಾಗಿತ್ತು. ಅವರ ನಿಧನದಿಂದ ತುಳುನಾಡಿನ ದೈವ ಪರಂಪರೆಯ ಹಿರಿಯ ಕೊಂಡಿ ಕಳಚಿದಂತ್ತಾಗಿದೆ. ಅವರ ದೈವಾರಾಧನೆಯ ಸೇವೆಯನ್ನು ಗುರುತಿಸಿ ಜಿಲ್ಲೆಯ ಅನೇಕ ಜಾತ್ರೋತ್ಸವ ಸಮಿತಿಗಳು, ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದವು. ಅವರಿಗೆ ಐವರು ಪುತ್ರಿಯರು ಇದ್ದಾರೆ.