ಮಂಗಳೂರಿನ ರಾಮಾಶ್ರಮ ಪಿಯು ಕಾಲೇಜಿನ ಸುಹಾನಿ ಉನ್ನತ ಸಾಧನೆ

ಮಂಗಳೂರಿನ ರಾಮಾಶ್ರಮ ಪಿಯು ಕಾಲೇಜಿನ ಸುಹಾನಿ ಉನ್ನತ ಸಾಧನೆ


ಮಂಗಳೂರು: ಇಲ್ಲಿಯ ರಾಮಾಶ್ರಮ ಪಿಯು ಕಾಲೇಜಿನ ವಿದ್ಯಾರ್ಥಿನಿ ನಗರದ ಬಿಜೈ ಕಾಪಿಕಾಡ್ ನಿವಾಸಿಯಾದ ಸುಹಾನಿ ಅವರು ತಮ್ಮ ಪಿಯುಸಿ ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ರಾಮಾಶ್ರಮ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಸುಹಾನಿ ಅಕೌಂಟೆನ್ಸಿ, ಬ್ಯುಸಿನೆಸ್ ಸ್ಟಡೀಸ್, ಸ್ಟ್ಯಾಟಿಸ್ಟಿಕ್ಸ್ ವಿಷಯಗಳಲ್ಲಿ 100/100 ಹಾಗೂ ಬೇಸಿಕ್ ಮಾಥ್ಸ್-99, ಹಿಂದಿ-99, ಇಂಗ್ಲೀಷ್-97 ಅಂಕ ಪಡೆದು 600ಕ್ಕೆ 595 ಅಂಕಗಳ ಮೂಲಕ ರಾಜ್ಯ ಮಟ್ಟದಲ್ಲಿ 6ನೇ ರ‍್ಯಾಂಕ್ ಪಡೆದ ಇವರು ವಿನಯ್ ಕುಮಾರ್ ಮತ್ತು ಕಿಶೋರಿ ವಿನಯ್ ದಂಪತಿಯ ಪುತ್ರಿ.

ಮುಂದಿನ ಶಿಕ್ಷಣಕ್ಕಾಗಿ ಸುಹಾನಿ ಅವರು ಮಂಗಳೂರಿನ ತ್ರಿಶಾ ಕಾಲೇಜಿನಲ್ಲಿ ಬಿ.ಕಾಂ.+ ಸಿಎ ಇಂಟಿಗ್ರೇಟೆಡ್ ಪ್ರೋಗ್ರಾಂನಲ್ಲಿ ಮುಂದುವರಿಯಲಿದ್ದಾರೆ.

ರಾಮಾಶ್ರಮ ಕಾಲೇಜಿನ ಅಧ್ಯಕ್ಷರಾದ ಡಾ. ಸುಕುಮಾರ್ ದಂಡಕೇರಿ, ಕರೆಸ್ಪಾಂಡೆಂಟ್ ಡಾ. ಕಿಶೋರ್ ಕುಮಾರ್ ಹಾಗೂ ತ್ರಿಶಾ ಸಂಸ್ಥೆಯ ಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್, ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ಸುಹಾನಿ ಅವರ ಸಾಧನೆಯನ್ನು ಅಭಿನಂದಿಸಿ, ಅವರ ಭವಿಷ್ಯಕ್ಕೆ ಹಾರ್ದಿಕ ಶುಭ ಹಾರೈಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article