ತ್ರಿಶಾ ವಿದ್ಯಾ ಪಿಯು ಕಾಲೇಜಿನ ಭೂಮಿಕಾ ರಾಜ್ಯ ಮಟ್ಟದಲ್ಲಿ 6ನೇ ರ‍್ಯಾಂಕ್
Friday, April 10, 2026
ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿರುವ ತ್ರಿಷಾ ವಿದ್ಯಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಕರ್ನಾಟಕ ಪಿಯುಸಿ ಮಂಡಳಿಯ ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಅಕೌಂಟೆನ್ಸಿ, ಬ್ಯುಸಿನೆಸ್ ಸ್ಟಡೀಸ್, ಬೇಸಿಕ್ ಮಾಥ್ಸ್, ಸ್ಟ್ಯಾಟಿಸ್ಟಿಕ್ಸ್, ಕನ್ನಡ ವಿಷಯಗಳಲ್ಲಿ 100/100 ಹಾಗೂ ಇಂಗ್ಲೀಷ್‌ನಲ್ಲಿ 95 ಅಂಕ ಪಡೆದು 600ಕ್ಕೆ 595 ಅಂಕಗಳ ಮೂಲಕ ರಾಜ್ಯ ಮಟ್ಟದಲ್ಲಿ 6ನೇ ರ‍್ಯಾಂಕ್ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾಗರಾಜ ಎ. ಹಾಗೂ ಶ್ರುತಿ ಎನ್.ಎ. ದಂಪತಿಯ ಪುತ್ರಿಯಾಗಿರುವ ಭೂಮಿಕಾ, ತಮ್ಮ ಶ್ರಮ ಮತ್ತು ದೃಢನಿಶ್ಚಯದ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಭವಿಷ್ಯದ ಗುರಿಯಾಗಿ ಭೂಮಿಕಾ ಅವರು ತ್ರಿಶಾ ವಿದ್ಯಾ ಕಾಲೇಜು, ಕಟಪಾಡಿಯಲ್ಲಿ ಬಿ.ಕಾಂ+ ಸಿಎ ಇಂಟಿಗ್ರೇಟೆಡ್ ಪ್ರೋಗ್ರಾಂಗೆ ಪ್ರವೇಶ ಪಡೆದಿದ್ದಾರೆ.
ತ್ರಿಶಾ ಸಂಸ್ಥೆಯ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹಾಗೂ ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ಭೂಮಿಕಾ ಅವರ ಸಾಧನೆಯನ್ನು ಅಭಿನಂದಿಸಿ, ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.