ಯುವಕ ನೀರುಪಾಲು: ಈಶ್ವರ್ ಮಲ್ಪೆ ತಂಡದಿಂದ ಮೃತದೇಹ ಪತ್ತೆ

ಯುವಕ ನೀರುಪಾಲು: ಈಶ್ವರ್ ಮಲ್ಪೆ ತಂಡದಿಂದ ಮೃತದೇಹ ಪತ್ತೆ

ಮಂಗಳೂರು: ಕಡಬ ತಾಲೂಕಿನ ಐತ್ತೂರು ಗ್ರಾಮದ ಅರಬ್ಬಿ ತೋಡು ಎಂಬಲ್ಲಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನೊಬ್ಬ ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.

ನಾಪತ್ತೆಯಾದ ಯುವಕನನ್ನು ಮಂಜು ಅವರ ಪುತ್ರ ರಕ್ಷಿತ್ (26) ಎಂದು ಗುರುತಿಸಲಾಗಿದೆ. ಮೂಲತಃ ಮರ್ದಾಳ ನಿವಾಸಿಯಾಗಿರುವ ರಕ್ಷಿತ್, ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.

ಸೋಮವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಐತ್ತೂರು ಗ್ರಾಮದ ಅರಬ್ಬಿ ತೋಡು ಪ್ರದೇಶಕ್ಕೆ ಸ್ನಾನಕ್ಕಾಗಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈಜಲು ತಿಳಿದಿದ್ದರೂ, ನೀರಿನ ಆಳದ ಅಂದಾಜು ತಪ್ಪಿರುವುದು ಅಥವಾ ಅಕಸ್ಮಿಕವಾಗಿ ನೀರಿನ ಸೆಳೆತ ಹೆಚ್ಚಿರುವುದು ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ನಡೆದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಆಗಮಿಸಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಘಟನೆ ನಡೆದ ಸ್ಥಳ ದುರ್ಗಮ ಆಗಿರುವುದರಿಂದ ಅಗ್ನಿಶಾಮಕ ವಾಹನಗಳು ನೇರವಾಗಿ ತಲುಪಲು ಸಾಧ್ಯವಾಗದೆ, ಸಿಬ್ಬಂದಿ ನಡೆದುಕೊಂಡೇ ಸ್ಥಳಕ್ಕೆ ತೆರಳಬೇಕಾದ ಪರಿಸ್ಥಿತಿ ಉಂಟಾಯಿತು.

ಕತ್ತಲಾಗಿದ್ದ ಹಿನ್ನೆಲೆ ಶೋಧ ಕಾರ್ಯಕ್ಕೆ ಅಡಚಣೆಗಳು ಎದುರಾಗಿದ್ದು, ಕಾರ್ಯಾಚರಣೆ ಕಷ್ಟಕರವಾಗಿಸಿತ್ತು. ನಂತರದಲ್ಲಿ ಮಂಗಳೂರಿನಿಂದ ಪ್ರಸಿದ್ಧ ಈಜುಗಾರ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸ್ಥಳಕ್ಕೆ ಆಗಮಿಸಿ, ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ರಾತ್ರಿ 11 ಸುಮಾರಿಗೆ ರಕ್ಷಿತ್ ಅವರ ಮೃತದೇಹವನ್ನು ಪತ್ತೆ ಹಚ್ಚಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article