ಮುಹಮ್ಮದ್ ಆಶಿಕ್ ಆತ್ಮಹತ್ಯೆಗೆ ಯುವತಿಯ ಕಿರುಕುಳವೇ ಕಾರಣ: ದೂರು
Monday, April 13, 2026
ಮಂಗಳೂರು: ಮೂಡುಶೆಡ್ಡೆ ಎದುರುಪದವಿನ ಯುವಕ ಮುಹಮ್ಮದ್ ಆಶಿಕ್ (22) ಆತ್ಮಹತ್ಯೆಗೆ ಯುವತಿಯೊಬ್ಬಳ ಕಿರುಕುಳವೇ ಕಾರಣ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರೀತಿಸಿದ ಹುಡುಗಿಯ ಮಾನಸಿಕ ಕಿರುಕುಳ ತಾಳಲಾರದೆ ಆಶಿಕ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಆತನ ತಂದೆ ಮುಹಮ್ಮದ್ ಹನೀಫ್ ಎಂಬವರು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರ್ಚ್ ೨೧ರ ಮಧ್ಯರಾತ್ರಿ ಆಶಿಕ್ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಈ ಸಾವಿಗೆ ನಿಖರ ಕಾರಣ ತಿಳಿದಿರಲಿಲ್ಲ. ಆದರೆ ಆಶಿಕ್‌ನ ಮೊಬೈಲ್ ಪರಿಶೀಲಿಸಿದಾಗ ಈತನ ಸಾವಿನ ರಹಸ್ಯ ಹೊರಬಿದ್ದಿದೆ ಎಂದು ತಿಳಿದು ಬಂದಿದೆ.
ಆಶಿಕ್ ನಗರದ ಕೂಳೂರಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ, ಅದೇ ಕಾಲೇಜಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಅನ್ಯೋನ್ಯ ಬಾಂಧವ್ಯವಿತ್ತು. ಆದರೆ ಬಳಿಕ ಆಕೆ ಈತನಿಂದ ದೂರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ದೂರಲಾಗಿದೆ.