ರೈಲ್ವೆ ಸ್ಟೇಷನ್ ಮಾಸ್ಟರ್ ಹುದ್ದೆ ಇನ್ನು ಮುಂದೆ ಸ್ಟೇಷನ್ ಮ್ಯಾನೇಜರ್

ರೈಲ್ವೆ ಸ್ಟೇಷನ್ ಮಾಸ್ಟರ್ ಹುದ್ದೆ ಇನ್ನು ಮುಂದೆ ಸ್ಟೇಷನ್ ಮ್ಯಾನೇಜರ್

ಮಂಗಳೂರು: ಭಾರತೀಯ ರೈಲ್ವೆಯ ಸ್ಟೇಷನ್ ಮಾಸ್ಟರ್ ಮತ್ತು ಸ್ಟೇಷನ್ ಸೂಪರಿಂಟೆಂಡೆಂಟ್ ಹುದ್ದೆಗಳ ಪದನಾಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಟೇಷನ್ ಮ್ಯಾನೇಜರ್ ಎಂದು ಮರುನಾಮಕರಣ ಮಾಡಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.

ರೈಲ್ವೆ ಮಂಡಳಿಯ ಆದೇಶದನ್ವಯ ಈ ಬದಲಾವಣೆ ಮಾಡಲಾಗಿದ್ದು, ವೇತನ ಶ್ರೇಣಿ ಲೆವೆಲ್-7ರಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಎಂದು ಮತ್ತು ಲೆವೆಲ್-8ರಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಸ್ಟೇಷನ್ ಮ್ಯಾನೇಜರ್ ಎಂದು ಬದಲಾಯಿಸಲಾಗಿದೆ. ಆದರೆ, ಈ ಬದಲಾವಣೆಯು ಅಧಿಕಾರಿಗಳ ಪ್ರಸ್ತುತ ಕರ್ತವ್ಯಗಳು, ಜವಾಬ್ದಾರಿಗಳು ಅಥವಾ ವೇತನ ರಚನೆಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆಲ್ ಇಂಡಿಯಾ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್ ಈ ನಿರ್ಧಾರವನ್ನು ಸ್ವಾಗತಿಸಿದೆ. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶರದ್ ಚಂದ್ರ ಪುರೋಹಿತ್ ಈಬಗ್ಗೆ ಮಾತನಾಡಿ, ಇದು ಸ್ಟೇಷನ್ ಮಾಸ್ಟರ್‌ಗಳ ಘನತೆ ಮತ್ತು ಗೌರವಕ್ಕೆ ಸಂದ ಐತಿಹಾಸಿಕ ಜಯ. ವಲಯ ಮಟ್ಟದಲ್ಲಿ ಜನರಲ್ ಮ್ಯಾನೇಜರ್ ಇರುವಂತೆ, ನಿಲ್ದಾಣದ ಮಟ್ಟದಲ್ಲಿ ಸ್ಟೇಷನ್ ಮ್ಯಾನೇಜರ್ ಎಂಬ ಪದನಾಮವು ಆಡಳಿತಾತ್ಮಕವಾಗಿ ಹೆಚ್ಚು ತರ್ಕಬದ್ಧವಾಗಿದೆ. ಈ ಹಿಂದೆ ಸಂಘಟನೆಯ ನಿರಂತರ ಹೋರಾಟದ ಫಲವಾಗಿ ಯುನಿಫಾರ್ಮ್ ಭತ್ಯೆ, ನೈಟ್ ಡ್ಯೂಟಿ ಭತ್ಯೆ ಮತ್ತು ಸಹಾಯಕ ಸ್ಟೇಷನ್ ಮಾಸ್ಟರ್ ಹುದ್ದೆ ರದ್ಧತಿಯಂತಹ ಪ್ರಮುಖ ಕಾರ್ಯಗಳನ್ನು ಮಾಡಲಾಗಿತ್ತು. ಈ ಮಹತ್ವದ ಬದಲಾವಣೆಗಾಗಿ ಅಸೋಸಿಯೇಷನ್ ರೈಲ್ವೆ ಮಂಡಳಿಗೆ ಕೃತಜ್ಞತೆ ಸಲ್ಲಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article