ಕೋಟೆಬಾಗಿಲು ಶಾಲೆಯಲ್ಲಿ ಯೆನೆಪೋಯ ರಾ.ಸೇ.ಯೋ. ಘಟಕದಿಂದ ವಾರ್ಷಿಕ ವಿಶೇಷ ಶಿಬಿರ
Monday, April 27, 2026
ಮೂಡುಬಿದಿರೆ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕೋಟೆಬಾಗಿಲು (ಜನರಲ್ ) ಇಲ್ಲಿ ವಾರ್ಷಿಕ ವಿಶೇಷ ಶಿಬಿರ ಆರಂಭಗೊಂಡಿತು.
ಮೆಲ್ವಿನ್ ಅಲ್ಬುಕರ್ಕ್ ಅವರು ವಾಷಿ೯ಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯೊಂದಿಗೆ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಿ ಸಹಕಾರ ನೀಡಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತಧಿಕಾರಿ ಮೊಹಮ್ಮದ್ ಶಾಹಿದ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೋಟೆಬಾಗಿಲು ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ವಿಜಯ ಮತ್ತು ರೂಪ ಕೋಟೆಬಾಗಿಲು ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದರು. ಎನ್.ಎಸ್.ಎಸ್.ನ ಸಂಯೋಜನಾಧಿಕಾರಿ ಪ್ರೊ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ನೆರೆವೇರಿತು.
ಸಿಂಚನ ಕಾರ್ಯಕ್ರಮವನ್ನು ನಿರೂಪಿಸಿದರು.