ಬಾವಿಗೆ ಬಿದ್ದ ಕಾರ್ಮಿಕರ ರಕ್ಷಣೆ
Monday, May 18, 2026
ಬಂಟ್ವಾಳ: ತಾಲೂಕಿನ ಕುರಿಯಾಳ ಎಂಬಲ್ಲಿ ಬಾವಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಅದಿತ್ಯವಾರ ಸಂಜೆ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ.
ಕಾರ್ಮಿಕರಾದ ಬರಿಮಾರು ನಿವಾಸಿಗಳಾದ ಪದ್ಮನಾಭ ಮತ್ತು ರಾಮ ಗಾಯಗೊಂಡವರಾಗಿದ್ದಾರೆ.
ಕುರಿಯಾಳ ಗ್ರಾಮದ ಕುಕ್ಕಾಜೆಯ ಕೇಶವ ಪೂಜಾರಿ ಎಂಬವರ ಮನೆಗೆ ಈ ಕೂಲಿಯಾಳುಗಳಿಬ್ಬರು ಆಗಮಿಸಿದ್ದರು. ಕೆಲಸ ಮುಗಿಸಿ ಮೇಲಕ್ಕೆ ಹತ್ತುವ ವೇಳೆ ಜಾರಿ ಬಿದ್ದಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಬಳಿಕ ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನೂ ಮೇಲಕ್ಕೆತ್ತುವಲ್ಲಿ ಸಫಲರಾದರು.