ಹಕ್ಕುಪತ್ರಕ್ಕಾಗಿ ಮುಂದುವರಿದ ಮೂರು ಕುಟುಂಬದ ಧರಣಿ
ಗೇಟ್‌ನ ಒಳಗಡೆ ಪ್ರತಿಭಟನೆ, ಬ್ಯಾನರ್, ಧ್ವಜ ಅಳವಡಿಸಲು ಇತ್ತೀಚೆಗೆ ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಮೂರು ಕುಟುಂಬವು ಹಕ್ಕುಪತ್ರಕ್ಕಾಗಿ ಗೇಟ್ ನಹೊರಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನಿರಿಸಿ ನೀಲಿ ಬಣ್ಣದ ಧತವ ಅಳವಡಿಸಿ ಧರಣಿ ಕುಳಿತಿದ್ದಾರೆ.
ಗುರುವಾರದಂದು ಸರಕಾರಿ ರಜೆ ಇದ್ದ ಕಾರಣದಿಂದ ಮೂರು ಕುಟುಂಬಗಳುಕೂಡ ಧರಣಿಯನ್ನು ನಡೆಸಿರಲಿಲ್ಲ, ಶುಕ್ರವಾರ ಮತ್ತೆ ಧರಣಿಯನ್ನು ಮುಂದುವರಿಸಿದ್ದಾರೆ. ಈ ಮೂರು ಕುಟುಂಬದ ಮನೆ ಯಜಮಾನಿ ಸಹಿತ ಎಲ್ಲಾ ಸದಸ್ಯರು ಕೂಡ ಗಿರಿಧರ ನಾಯ್ಕ್ ಅವರ ನೇತೃತ್ವದಲ್ಲಿ ಧರಣಿ ಕುಳಿತಿದ್ದಾರೆ.
ಕಳೆದ ವಾರ ನಾಲ್ಕುದಿನಗಳ ಕಾಲ ನಡೆಸಿದ ಧರಣಿತ ವೇಳೆ ಪುತ್ತೂರು ಮತ್ತು ಬಂಟ್ವಾಳ ಮಂಡಲದ ಬಿಜೆಪಿ ನಾಯಕರು, ಕಾರ್ಯಕರ್ತರು ಕೂಡ ಸಾಥ್ ನೀಡಿದ್ದರು. ಆದರೆ ಕಳೆದೆರಡು ದಿನಗಳ ಧರಣಿಯ ವೇಳೆ ಈ ನಾಯಕರು ಯಾರು ಧರಣಿಯಲ್ಲಿ ಪಾಲ್ಗೊಂಡಿಲ್ಲ. ಪ.ಪಂ.ದ ಮೂರು ಕುಟುಂಬ ಕಳೆದ ಒಂದುವಾರದಿಂದ ಬಿ.ಸಿ.ರೋಡಿನ ತಾಲೂಕು ಆಡಳಿತಸೌಧದ ಮುಂಭಾಗ ಧರಣಿ ಕುಳಿತರೂ ರಾಜಕೀಯ ಒಣಪ್ರತಿಷ್ಠೆಗಾಗಿ ಇನ್ನು ಕೂಡ ಈ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಮುಂದಾಗದಿರುವುದು ವಿಪರ್ಯಾಸವಾಗಿದೆ ಎಂಬ ಟೀಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.