ಗಾಳಿ, ಮಳೆಗೆ ಹಾರಿದ ಕ್ಯಾಂಟೀನ್ ಛಾವಣಿ

ಗಾಳಿ, ಮಳೆಗೆ ಹಾರಿದ ಕ್ಯಾಂಟೀನ್ ಛಾವಣಿ


ಬಂಟ್ವಾಳ: ಮಂಗಳವಾರ ಸಂಜೆ ಬೀಸಿದ ಬಿರುಗಾಳಿ, ಗುಡುಗು, ಮಳೆಗೆ ಸಿದ್ಧಕಟ್ಟೆಯ ಮಾರುಕಟ್ಟೆ ನಿವಾಸಿ ಗೋಪಾಲ ಪೂಜಾರಿ ಅವರ ಕ್ಯಾಂಟೀನ್‌ನ ಛಾವಣಿ ಹಾರಿಹೋಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.


ಅದೇ ರೀತಿ ಪುಂಜಾಲಕಟ್ಟೆ-ಪುರಿಯ ರಸ್ತೆಯಲ್ಲಿ ಅಶ್ವತ್ಥ ಮರದ ಗೆಲ್ಲು ಬಿದ್ದು ವಿದ್ಯುತ್ ತಂತಿ ತುಂಡಾಗಿದೆ. ಮೆಸ್ಕಾಂ ಸಿಬ್ಬಂದಿಗಳು ಸ್ಥಳೀಯರ ಸಹಕಾರದಲ್ಲಿ ಮರಗಳನ್ನು ತೆರವುಗೊಳಿಸಿ ವಿದ್ಯುತ್ ತಂತಿಯನ್ನು ಸರಿಪಡಿಸುವ ಕಾರ್ಯ ನಡೆಸಿದರು.

ಬಂಟ್ವಾಳ ಸುತ್ತಮತ್ತಲಿನಲ್ಲಿ ಬೀಸಿದ ಗಾಳಿ, ಮಳೆ, ಗುಡುಗಿನ ಅಬ್ಬರದಿಂದಾಗಿ ರಾತ್ರಿಯಿಡಿ ಕಡಿತಗೊಂಡಿದ್ದ ವಿದ್ಯುತ್ ಬುಧವಾರ ಬೆಳಗ್ಗೆಯೇ ಉರಿದಿದೆ.

ಬುಧವಾರ ಮಧ್ಯಾಹ್ನದ ಬಳಿಕ ಮೋಡಕವಿದ ವಾತಾವರಣ ಇದ್ದು, ಸಂಜೆಯ ವೇಳೆಗೆ ಗುಡುಗಿನ ಅಬ್ಬರವಿತ್ತಾದರೂ ಮಳೆ ಸುರಿದಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article