ಗಾಳಿ ಮಳೆ: ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ, ಲಕ್ಷಕ್ಕೂ ಅಧಿಕ ನಷ್ಟ
Wednesday, May 13, 2026
ಮೂಡುಬಿದಿರೆ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಮಾರ್ಪಾಡಿ ಗ್ರಾಮದ ಸ್ವರಾಜ್ಯ ಮೈದಾನದ ಬಳಿಯಲ್ಲಿರುವ ನಿವಾಸಿ, ಪತ್ರಕರ್ತ ಧನಂಜಯ ಮೂಡುಬಿದಿರೆ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.
"ಪುತ್ತಿಗೆ ಮನೆ"ಯ ಈಶಾನ್ಯ ಭಾಗದಲ್ಲಿದ್ದ ತೆಂಗಿನ ಮರ ಬುಡಸಮೇತ ಮನೆಗೆ ಅಪ್ಪಳಿಸಿದೆ. ಈ ಆಕಸ್ಮಿಕ ಘಟನೆಯಿಂದ ಮನೆಯ ಈಶಾನ್ಯ ಭಾಗದ ಒಳಾಂಗಣ ಹಾಗೂ ಹಂಚಿನ ಸೂರು ಸಂಪೂರ್ಣ ಜರ್ಜರಿತಗೊಂಡಿದ್ದು, ಮೂಲೆಮಾಡು ತೀವ್ರವಾಗಿ ಜಖಂಗೊಂಡಿದೆ.
ಇದೇ ಮನೆ 2024ರ ಜುಲೈಯಲ್ಲಿ ಭಾರೀ ಗಾಳಿಗೆ ಸಂಪೂರ್ಣ ಕುಸಿದಿತ್ತು.

