ಶ್ರೀ ಕ್ಷೇತ್ರ ಪೊಳಲಿಯಲ್ಲಿ ನೂತನ ಅನ್ನಛತ್ರ, ಮದುವೆ ಸಭಾಂಗಣಕ್ಕೆ ಶಂಕುಸ್ಥಾಪನೆ
ಸುಮಾರು 4.50 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತವಾದ ನೂತನ ಅನ್ನ ಛತ್ರ ಹಾಗೂ 3.50 ಕೋ.ರೂ. ವೆಚ್ಚದಲ್ಲಿ ನೂತನ ಮದುವೆ ಸಭಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಳೇ ಅನ್ನಛತ್ರ ಮತ್ತ ಸಭಾಂಗಣ ನಿರ್ಮಾಣದ ತೆರವಿಗಾಗಿ ದೇವಳದ ತಂತ್ರಿಗಳು, ಅರ್ಚಕರು, ಗುತ್ತಿನವರು, ಆಡಳಿತಮಂಡಳಿ ಹಾಗೂ ಭಕ್ತಾಧಿಗಳ ಉಪಸ್ಥಿತಿಯಲ್ಲಿ ಪ್ರಾರ್ಥಿಸಲಾಯಿತು.
ದೇವಳದ ಸುಬ್ರಹ್ಮಣ್ಯ ತಂತ್ರಿ, ಪವಿತ್ರಪಾಣಿ ಅನುವಂಶಿಕ ಮೊಕ್ತೇಸರ ಮಾಧವ ಭಟ್, ಕೆ. ರಾಮ ಭಟ್, ಪದ್ಮನಾಭ ಭಟ್, ಶ್ರೀಕಾಂತ್ ಮಯ್ಯ, ನಿರ್ಮಿತಿ ಕೇಂದ್ರದ ಅಧಿಕಾರಿ ನವೀನ್, ದೇವಳದ ಇಂಜಿನಿಯರ್ ಲಕ್ಷಣ್ ಪೂಜಾರಿ, ಗುತ್ತಿಗೆದಾರ ಗಿರೀಶ್, ದೇವಳದ ಆಡಳಿತ ಮೊಕ್ತೇಸರ ಡಾ. ಎ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಫರಂಗೀಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಪ್ರಮುಖರಾದ ಜೀವರಾಜ್ ಶೆಟ್ಟಿ ಅಮ್ಮುಂಜೆಗುತ್ತು, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ಕೃಷ್ಣರಾಜ ಮಾರ್ಲ ಮುತ್ತೂರು, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು, ಭುವನೇಶ್ ಪಚಿನಡ್ಕ, ಚಂದ್ರಶೇಖರ್ ಭಂಡಾರಿ, ಭಾಸ್ಕರ್ ಭಟ್ ಗಂಜಿಮಠ, ಯಶವಂತ ಪೂಜಾರಿ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ, ಲೋಕೇಶ್ ಭಂಡಾರಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ಮತ್ತಿತರರು ಉಪಸ್ಥಿತರಿದ್ದರು.