ಬ್ಯಾಂಕ್ ಕಾವಲುಗಾರನ ಕೊಲೆ

ಬ್ಯಾಂಕ್ ಕಾವಲುಗಾರನ ಕೊಲೆ

ಕಾಸರಗೋಡು: ಬ್ಯಾಂಕ್ ಕಾವಲುಗಾರರನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಮಾರ್ಪನಡ್ಕದಲ್ಲಿ ರವಿವಾರ ರಾತ್ರಿ ನಡೆದಿದೆ.

ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಕಾವಲುಗಾರ ಸುರೇಶ್ (42) ಕೊಲೆಗೀಡವಾದವರು. ಘಟನೆ ಬಗ್ಗೆ ಕಿರಣ್ , ಅಖಿಲೇಶ್ ಎಂಬವರ ವಿರುದ್ಧ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ರವಿವಾರ ಸಂಜೆ ಕುಂಬ್ಡಾಜೆ ಗ್ರಾಮ ಪಂಚಾಯತ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ವೇಳೆ ನಡೆದ ಮಾತಿನ ಚಕಮಕಿಯೇ ಕೊಲೆಗೆ ಕಾರಣ.

ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಆರೋಪಿಗಳು ಚಾಕುವಿನಿಂದ ಇರಿದಿದ್ದು, ಗಂಭೀರ ಗಾಯಗೊಂಡ ಸುರೇಶ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article