ಹಾವು ಕಡಿದು ಮಹಿಳೆ ಸಾವು
Sunday, May 3, 2026
ಕೊಲ್ಲೂರು: ದನಗಳಿಗೆ ಹುಲ್ಲು ಕೊಯ್ಯಲು ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಕೊಲ್ಲೂರಿನಲ್ಲಿ ಸಂಭಿಸಿದೆ.
ಮೃತರನ್ನು ಕೆರಾಡಿ ಗ್ರಾಮದ ಪ್ರೇಮ ಶೆಡ್ತಿ (47) ಎಂದು ಗುರುತಿಸಲಾಗಿದೆ. ಮೇ ೧ರಂದು ಸಂಜೆ ಪ್ರೇಮ ಶೆಡ್ತಿ ಅವರು ತಮ್ಮ ಮನೆಯ ಪಕ್ಕದ ತೋಟದಲ್ಲಿ ದನಗಳಿಗೆ ಹುಲ್ಲು ಕೊಯ್ಯುತ್ತಿದ್ದರು.
ಈ ವೇಳೆ ಅವರ ಬಲಗಾಲಿಗೆ ಯಾವುದೋ ಹಾವು ಕಚ್ಚಿದಂತಾಗಿದೆ. ಕೂಡಲೇ ಮನೆಗೆ ಬಂದು ಪರಿಶೀಲಿಸಿದಾಗ ಕಾಲಿನ ಎರಡು ಮೂರು ಕಡೆಗಳಲ್ಲಿ ಹಾವಿನ ಕಡಿತದ ಗುರುತುಗಳು ಕಂಡುಬಂದಿವೆ.