ಕುಮಾರಧಾರೆಯಲ್ಲಿ ಅವಭೃತೋತ್ಸವ

ಕುಮಾರಧಾರೆಯಲ್ಲಿ ಅವಭೃತೋತ್ಸವ

ಸುಬ್ರಹ್ಮಣ್ಯ: ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನರಸಿಂಹ ಜಯಂತಿ ಮಹೋತ್ಸವದ ಅಂಗವಾಗಿ ಇಂದು ಶನಿವಾರ ಸುಬ್ರಹ್ಮಣ್ಯ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಈ ಅಂಗವಾಗಿ ಕುಮಾರಧಾರಾ ನದಿಯಲ್ಲಿ ಅವಭೃತೋತ್ಸವವು ಶ್ರದ್ಧಾ-ಭಕ್ತಿಯಿಂದ ನೆರವೇರಿತು. ವೈದಿಕ ಮಂತ್ರೋಚ್ಚಾರಣೆಗಳ ಮಧ್ಯೆ ನಡೆದ ಈ ಪವಿತ್ರ ಕ್ರಿಯೆ ಉತ್ಸವದ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.

ಇದರೊಂದಿಗೆ ವಸಂತ ಪೂಜೆ ಕೂಡ ವಿಧಿವಿಧಾನಗಳೊಂದಿಗೆ ನೆರವೇರಿತು. ಈ ಸಂದರ್ಭ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ವಿಧಿಗಳಲ್ಲಿ ತೊಡಗಿ ಪುಣ್ಯ ಗಳಿಸಿದರು.

ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮವು ಸಂಪ್ರದಾಯ, ಆಚಾರ ಮತ್ತು ಭಕ್ತಿ ಪರಂಪರೆಯ ಸಾರ್ಥಕತೆಯನ್ನು ಪ್ರತಿಬಿಂಬಿಸಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article