ಮಾಹೆ: ಮೇ.15, 16 ರಂದು ಘಟಿಕೋತ್ಸವ
ಮೇ 16 ರಂದು ಮಧ್ಯಾಹ್ನ 2.30ಕ್ಕೆ ಮಾಹೆ ಆನ್ಲೈನ್ ಶಿಕ್ಷಣದ 3ನೇ ಘಟಿಕೋತ್ಸವ ಆಯೋಜಿಸಲಾಗಿದ್ದು, ಆನ್ಲೈನ್ ಶಿಕ್ಷಣ ಪಡೆದ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹೆ ಮಂಗಳೂರು ಕ್ಯಾಂಪಸ್ನ ಸಹ ಕುಲಪತಿ ಡಾ. ದಿಲೀಪ್ ಜಿ. ನಾಯಕ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದವಿ ಪ್ರದಾನ ಸಮಾರಂಭದಲ್ಲಿ ಪಿಎಚ್‌ಡಿ ಸೇರಿದಂತೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು. ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ ಶೈಕ್ಷಣಿಕ ಶ್ರೇಷ್ಠತೆಗಾಗಿ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಬದುಕಿನ ಹೊಸ ಪಯಣದ ಸಂಕಲ್ಪದೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದರು.
ಈ ಎರಡು ದಿನಗಳ ಘಟಿಕೋತ್ಸವ ಪೈಕಿ ಮಂಗಳೂರು ಘಟಿಕೋತ್ಸವದಲ್ಲಿ ಒಟ್ಟು 1,258 ಮತ್ತು ಮಾಹೆ ಆನ್ಲೈನ್ ಶಿಕ್ಷಣದ ಘಟಿಕೋತ್ಸವದಲ್ಲಿ 986 ಮಂದಿ ಪದವಿ ಸ್ವೀಕರಿಸಲಿದ್ದಾರೆ.
ಮೊದಲ ದಿನ ನೇರವಾಗಿ 554 ಮಂದಿ, 22 ಪಿಎಚ್‌ಡಿ ಪದವಿ, ಗೈರು ಹಾಜರಿಯಲ್ಲಿ 682 ಹಾಗೂ ಎರಡನೇ ದಿನದಲ್ಲಿ 451 ಮಂದಿ ನೇರವಾಗಿ, 535 ಮಂದಿಯ ಗೈರು ಹಾಜರಿಯಲ್ಲಿ ಪದವಿ ಸ್ವೀಕಾರ ನಡೆಯಲಿದೆ.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಉಣ್ಣಿಕೃಷ್ಣನ್, ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಡೀನ್ ಡಾ. ಅಶಿತಾ ಉಳ್ಳೂರು ಇದ್ದರು.