ಮೇ.24 ರಂದು ‘ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲಂ ಅವಾರ್ಡ್ಸ್-2026’

ಮೇ.24 ರಂದು ‘ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲಂ ಅವಾರ್ಡ್ಸ್-2026’

ಮಂಗಳೂರು: ಕರಾವಳಿಯ ಚಿತ್ರರಂಗದಲ್ಲಿ ಸತತ ಐದನೇ ಬಾರಿಗೆ ಅತಿ ದೊಡ್ಡ ಸಿನಿಗಾಲಾ ಎನಿಸಿಕೊಂಡಿರುವ ಸ್ಯಾಂಡಿಸ್ ಕಂಪೆನಿ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲಂ ಅವಾರ್ಡ್ಸ್-2026’ ಈ ಬಾರಿ ಮೇ 24ರ ಸಂಜೆ 3ಕ್ಕೆ ಮೂಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ಕೊಲ್ನಾಡ್‌ನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಸ್ಯಾಂಡಿಸ್ ಕಂಪೆನಿಯ  ಸಂದೇಶ್ ರಾಜ್ ಬಂಗೇರ, ಈ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರರಂಗ ಹಾಗೂ ರಾಜಕೀಯ ವಲಯದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ತರುಣ್ ಸುಧೀರ್, ನಟಿ ಸೋನಾಲ್ ಮೊಂತೆರೋ, ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ನಟ ತ್ರಿವಿಕ್ರಮ ಭಾಗವಹಿಸಲಿದ್ದಾರೆ. ಇವರೊಂದಿಗೆ ವಿಧಾನಸಭಾ ಸಭಾಧ್ಯಕ್ಷರಾದ ಯು. ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಎ. ಕೋಟ್ಯಾನ್, ಮೈಂಡ್ ಮೆಕ್ಯಾನಿಸಂ ಸ್ಥಾಪಕರಾದ ಶ್ರೀನಾಥ್ ಶೆಟ್ಟಿ, ಆಸ್ತ್ರ ಗ್ರೂಪ್ ಸ್ಥಾಪಕರಾದ ಲಂಚುಲಾಲ್ ಕೆ.ಎಸ್. ಮತ್ತು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೇರಿದಂತೆ ತುಳು ಚಿತ್ರರಂಗದ ದಿಗ್ಗಜ ಕಲಾವಿದರು, ನಿರ್ಮಾಪಕರು ಹಾಗೂ ತಂತ್ರಜ್ಞರು ಉಪಸ್ಥಿತರಿರಲಿದ್ದಾರೆ ಎಂದರು. ಈ ಬಾರಿ 2025ರಲ್ಲಿ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿದ್ದು, ‘ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್’ ಹಾಗೂ ‘ವರ್ಸಟೈಲ್ ಆಕ್ಟರ್ ಅವಾರ್ಡ್’ ಸೇರಿ ಒಟ್ಟು 30 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಸಿನಿಮಾ ರಂಗದಲ್ಲಿ ಅಪೂರ್ವ ಸಾಧನೆಗೈದ ಡಾ. ದೇವದಾಸ್ ಕಾಪಿಕಾಡ್ ಹಾಗೂ ಸರೋಜಿನಿ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ತುಳು ಚಿತ್ರರಂಗದ ನಟ-ನಟಿಯರಿಂದ ಜಬರ್ದಸ್ತ್ ನೃತ್ಯ, ಸಿಸಿಲಿಂಗ್ ಗಾಯ್ಸ್ ತಂಡದಿಂದ ರಸಮಂಜರಿ ಹಾಗೂ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಲಿವೆ. 

ಉಚಿತ ಪ್ರವೇಶ..

ಕರಾವಳಿಯ ಸಿನಿಮಾ ಪ್ರೇಮಿಗಳಿಗೆ ಮತ್ತು ಸಾರ್ವಜನಿಕರಿಗೆ ಈ ಭವ್ಯ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ಸಂಪೂರ್ಣ ಉಚಿತ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ. ಇಡೀ ಕಾರ್ಯಕ್ರಮವನ್ನು ಪ್ರಸಿದ್ಧ ನಿರೂಪಕರಾದ ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಅವರು ಅತ್ಯಂತ ರೋಚಕವಾಗಿ ನಡೆಸಿಕೊಡಲಿದ್ದಾರೆ ಎಂದರು. 

ಪ್ರಮುಖರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಚಿನ್ ಉಪ್ಪಿನಂಗಡಿ ಹಾಗೂ ಯಶ್ ರಾಜ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article