ವಿಶ್ವ ಶಾಂತಿಗಾಗಿ ಮೌನ ಧರಣಿ
Saturday, May 23, 2026
ಮಂಗಳೂರು: ಜಾಗತಿಕ ಯುದ್ಧ ಭೀತಿ, ಮಾನವೀಯ ಸಂಬಂಧಗಳಲ್ಲಿ ಬಿರುಕು ಹೋಗಲಾಡಿಸಿ ಭೂಮಿಯ ಮೇಲೆ ರಕ್ತ ಸಿಂಚನ ನಿಲ್ಲಲಿ ಹಸಿರು ಹಂದರ ಬೆಳೆಯಲಿ ಎನ್ನುವ ಮೂಲಕ ವಿಶ್ವ ಶಾಂತಿಗಾಗಿ ಮೌನ ಧರಣಿ, ಜಾಗೃತಿ ಅಭಿಯಾನ ಮೇ 23ರಂದು ನಗರದ ಹಂಪನಕಟ್ಟೆ ಕ್ಲಾಕ್ ಟವರ್ ಬಳಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 7ರ ವರೆಗೆ ಪುಟ್ಟ ಮಗುವಿನ ಜತೆಗೆ ನಿಂತು ಮಾಡಲಿದ್ದೇನೆ ಎಂದು ಕುಂದಾಪುರದ ಮಕ್ಕಳ ಸಂಸ್ಥೆಯ ರಾಮಾಂಜಿ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಳವಳಿ ಜಾಗತಿಕ ಮಟ್ಟದಲ್ಲಿ ಸಹಬಾಳ್ವೆ, ಶಾಂತಿ, ಸೌಹಾರ್ದತೆ, ಪರಸ್ಪರ ಹೊಂದಾಣಿಕೆ, ಮಾನವ ಪ್ರೀತಿ, ಪರಿಸರ ಕಾಳಜಿ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಅವಕಾಶ ನೀಡುವಂತೆ ಈ ಮೌನವಾಗಿ ಆಗ್ರಹಿಸಲಾಗುತ್ತದೆ ಎಂದರು.