ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಾಲನೆ: ತಲಾ 25 ಸಾವಿರ ದಂಡ

ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಾಲನೆ: ತಲಾ 25 ಸಾವಿರ ದಂಡ

ಮಂಗಳೂರು: ಇಬ್ಬರು ಅಪ್ರಾಪ್ತ ಬಾಲಕರು ಪ್ರತ್ಯೇಕವಾಗಿ ದ್ವಿಚಕ್ರ ವಾಹನ ಚಲಾಯಿಸಿದ್ದು, ಈ ವಾಹನ ಮಾಲಿಕರಿಗೆ ತಲಾ 25,000 ದಂಡ ವಿಧಿಸಿ ನ್ಯಾಯಾಲಯ ಆದೇಶಹೊರಡಿಸಿದೆ.

ಘಟನೆಯ ವಿವರ:

ಏ.6 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ನಲ್ಲಿ KA-19-HT-9694 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಹಾಗೂ ಏ.28 ರಂದು ಬಿಸಿ ರೋಡ್‌ನ ಬಳಿ, KA05KG6785 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ ಪೊಲೀಸರು ವಾಹನ ತಪಾಸಣೆಯ ವೇಳೆ ಪತ್ತೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ವಾಹನಗಳ ಮಾಲಿಕರ ವಿರುದ್ಧ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಕಲಂ:199(A) IMV ಅಡಿಯಲ್ಲಿ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಣ ಪತ್ರ ಸಲ್ಲಿಸಿದ್ದು, ನ್ಯಾಯಾಲಯವು ಮೇ.18 ರಂದು ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡೂ ವಾಹನದ ಮಾಲೀಕರಿಗೆ ತಲಾ 25,000 ರೂ. ದಂಡ ವಿಧಿಸಿ ಅದೇಶ ಹೊರಡಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article