ಬಕ್ರೀದ್: ಅಕ್ರಮ ಗೋ ಸಾಗಾಟ ತಡೆಗೆ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ಆಗ್ರಹ

ಬಕ್ರೀದ್: ಅಕ್ರಮ ಗೋ ಸಾಗಾಟ ತಡೆಗೆ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ಆಗ್ರಹ


ಮಂಗಳೂರು: ಗೋವಿನ ಹಿಂಸಾತ್ಮಕ ಸಾಗಾಟ ತಡೆಯಲು ಪೋಲಿಸರಿಗೆ ಸಂಪೂರ್ಣ ಅಧಿಕಾರವಿದ್ದು ಯಾವುದೇ ವಾಹನದಲ್ಲಿ ಅಕ್ರಮ ಗೋಸಾಗಾಟ ಆಗದಂತೆ ವಿಶೇಷವಾಗಿ ಮೇ 28ರ ವರೆಗೆ ಸಂಪೂರ್ಣ ಬಂದೋಬಸ್ತ್, ಗಡಿಭಾಗದಲ್ಲಿ ಚೆಕ್ ಪೋಸ್ಟ್ ಹಾಕಿ ತಡೆಯಬೇಕು. ಎಲ್ಲ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು. ಅಗತ್ಯ ಇರುವ ಸ್ಥಳಗಳಲ್ಲಿ ಮೇ 28ರವರೆಗೆ ಹೆಚ್ಚುವರಿ ಸಿಬ್ಬಂದಿ ಅಥವಾ ಪೊಲೀಸ್ ಮೀಸಲು ಪಡೆ ನಿಯುಕ್ತಿಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ವಿಹಿಂಪ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕಟೀಲು ದಿನೇಶ್ ಪೈ,  ಗೋಕಳ್ಳತನ ಆದ ಸ್ಥಳಕ್ಕೆ ತಕ್ಷಣ ಪೊಲೀಸ್ ಶ್ವಾನ ಕರೆಸಿ ಗೋವಿನ ವಧೆ ಆಗುವ ಮೊದಲೇ ಮಾಲು ಸಹಿತ ಕಳ್ಳನನ್ನು ಬಂಧಿಸಬೇಕು.  ವಾಹನದೊಳಗೆ ಜಾನುವಾರುಗಳಿವೆಯೋ ಎಂದು ಪರೀಕ್ಷಿಸಲು ಟೋಲ್ ಪ್ಲಾಝಾದಂತಹ ಕಡೆಗಳಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಇಲೆಕ್ಟ್ರಾನಿಕ್ ಸ್ಕ್ಯಾನರ್ ಬಳಸಬೇಕು. ಗೋವಂಶ ವಧೆ ಆಗುತ್ತಿದೆಯೋ ಮಾಹಿತಿ ತಿಳಿದುಕೊಳ್ಳಲು ಸೈಲೆಂಟ್ ಡ್ರೋನ್ ಬಳಸಬೇಕು. ಪುನರಾವರ್ತಿತ ಅಪರಾಽಗಳನ್ನು ತಂತ್ರಜ್ಞಾನದ ಮೂಲಕ ತಕ್ಷಣ ಗುರುತಿಸಿ ಅವರಿಗೆ ಮತ್ತೆ ಜಾಮೀನು ಸಿಗದ ಹಾಗೆ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದರು.

ಅಕ್ರಮ ಗೋಸಾಗಾಟ, ಗೋವಧೆ ಮಾಂಸ ಮಾರಾಟ ಮಾಡುವ ದೊಡ್ಡ ಜಾಲ ಇದ್ದು ಅವರನ್ನು ಗುರುತಿಸಿ ಕೋಕಾ ಕಾಯಿದಯಂತೆ ಪ್ರಕರಣ ದಾಖಲಿಸಬೇಕು. ಪ್ರತಿಯೊಂದು ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಗೋವುಗಳು ಎಲ್ಲಿಂದ ತಂದದ್ದು ಎಂಬುದನ್ನು ತನಿಖೆ ಮಾಡಬೇಕು. ಎಲ್ಲಿಗೆ ಹೋಗುತ್ತಿತ್ತು, ಯಾರು ಮಾಂಸ ಖರೀದಿಸುತ್ತಿದ್ದರು ಎಲ್ಲವೂ ತನಿಖೆ ಮಾಡಬೇಕು. ಅಕ್ರಮ ಗೋಸಗಾಟದ ವಾಹನ ಮಾಲಕರನ್ನು ಬಂಧಿಸಬೇಕು. ಜಾಮೀನು ಮೇಲೆ ಹೊರಗಿರುವ ಬಹುತೇಕ ವಾಹನ ಮತ್ತೆ ಅದೇ ಅಪರಾಧ ಮಾಡುವ ಸಾಧ್ಯತೆ ಇದ್ದು, ಇಂತಹ ವಾಹನಗಳನ್ನು ಮೇ 28ರವರೆಗೆ ಪೊಲೀಸ್ ಠಾಣೆಯಲ್ಲಿ ಇರಿಸಬೇಕು. ಗೋರಕ್ಷಣೆಗೆ ಪೋಲಿಸರು ಸಾರ್ವಜನಿಕರ ಸಹಕಾರ ತೆಗೆದುಕೊಂಡು ಗೋವಧೆ ತಡೆಯಬೇಕು ಎಂದು ಅವರು ಹೇಳಿದರು.

ಭಾರತೀಯ ನಾಗರಿಕ ಸುರಕ್ಷಾ ಸಂಹಿಂತೆ ಸೆಕ್ಷನ್ 40ರ ಪ್ರಕಾರ, ಯಾವುದೇ ಸಾಮಾನ್ಯ ಪ್ರಜೆಯು ತನ್ನ ಕಣ್ಣೆದುರೇ ಗಂಭೀರ ಅಪರಾಧವನ್ನು (ಜಾಮೀನು ರಹಿತ ಮತ್ತು ಸಂಜ್ಞೆಯ ಅಪರಾಧ) ಎಸಗುವ ವ್ಯಕ್ತಿಯನ್ನು ಬಂಧಿಸಲು ಅಥವಾ ಇತರರ ಸಹಾಯದಿಂದ ಬಂಧಿಸಲು ಅಧಿಕಾರವನ್ನು ಹೊಂದಿರುತ್ತಾನೆ. ಬಂಽಸಿದವರನ್ನು ವಿಳಂಬ ಮಾಡದೆ ಗರಿಷ್ಠ ಆರು ಘಂಟೆಯೊಳಗೆ ಪೊಲೀಸರಿಗೆ ಹಸ್ತಾಂತರಿಸಬೇಕು. ಗ್ರಾಮದಲ್ಲಿ ಗೋ ಕಳ್ಳತನ ತಡೆಯಲು ಗೋಪಾಲಕರ ಮೂಲಕ ಗ್ರಾಮ ಗೋರಕ್ಷ ದಳ ಚಿಸಲು ಬಜರಂಗದಳ ಸಹಕರಿಸುತ್ತದೆ ಎಂದರು.

ರಾಜ್ಯದಲ್ಲಿ ಗೋವಂಶದ ಹತ್ಯೆ ನಿಷೇಧಿಸಿದ್ದು, ಗೋಹತ್ಯೆ ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗೋಹತ್ಯೆ ತಡೆಯಬೇಕು, ಗೋವಂಶದ ಹತ್ಯೆ, ಹಿಂಸೆ ಹಾಗೂ ಬಲಿ (ಕುರ್ಬಾನಿ) ನೀಡಿದಲ್ಲಿ ಅಂತಹ ಸ್ಥಳವನ್ನು ಸರಕಾರ ಮುಟ್ಟುಗೋಲು ಹಾಕಬೇಕು. ಕೇವಲ ಒಂದು ಜಾನುವಾರನ್ನು ಕುರ್ಬಾನಿ ನೀಡಿದರೂ, ವಧೆ ಮಾಡಿದರೂ ಅಂತಹ ಕಟ್ಟಡ, ಖಾಲಿ ಸ್ಥಳ, ಮನೆ ಅಥವಾ ಇನ್ಯಾವುದೇ ಸ್ಥಳವನ್ನು ಸರಕಾರ ಮುಟ್ಟುಗೋಲು ಹಾಕಬೇಕಾಗಿದ್ದು, ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪೋಲಿಸರು ತಮ್ಮ ಪೂರ್ಣ ಅಽಕಾರ ಉಪಯೋಗಿಸಿ ಸಂಪೂರ್ಣವಾಗಿ ಗೋವಂಶದ ಹತ್ಯೆ ಹಿಂಸೆ ಹಾಗೂ ಬಲಿ (ಕುರ್ಬಾನಿ) ತಡೆಯಬೇಕು. ಪೋಲೀಸರು ಗೋರಕ್ಷಣೆಯ ಪುತಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಒಂದೇ ಒಂದು ಗೋ ವಂಶದ ಹತ್ಯೆ, ಹಿಂಸೆ ಹಾಗೂ ಬಲಿ ಆಗದಂತೆ ಪೊಲೀಸರೇ ಬೀಟ್ ಪೊಲೀಸ್ ಅಥವಾ ವಿಚಕ್ಷಣ ವ್ಯವಸ್ಥೆ ಮೂಲಕ ಮಾಹಿತಿಯನ್ನು ಪಡೆದುಕೊಂಡು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬೀಟ್ ಪೊಲೀಸ್ ಸರಿಯಾದ ಮಾಹಿತಿಯನ್ನು ಕ್ಲಪ್ತ ಸಮಯಕ್ಕೆ ತೆಗೆದುಕೊಳ್ಳದೆ ಗೋವಂಶದ ಹತ್ಯೆ, ಕುರ್ಬಾನಿ ನಡೆದಲ್ಲಿ ಅವರನ್ನು ತಕ್ಷಣ ಅಮಾನತು ಮಾಡಿ ಅವರ ಮೇಲೆ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಹಿತಿ ನೀಡಿ..

ಗೋಸಂಬಂಧಿತ ಅಪರಾಧ ಕಂಡು ಬಂದರೆ ಸಾರ್ವಜನಿಕರು ತಕ್ಷಣ 112 ಮೂಲಕ ಪೋಲಿಸರಿಗೆ ಮಾಹಿತಿ ಕೊಡಬೇಕು. ಮತ್ತು ಸಹಕಾರಕ್ಕಾಗಿ ಸ್ಥಳೀಯ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರನ್ನು ಸಂಪರ್ಕಿಸಬೇಕು. ಸಾರ್ವಜನಿಕರಿಂದ ಮಾಹಿತಿ ದೊರೆತ ಕೂಡಲೇ ಪೊಲೀಸರು ಗೋವಂಶವನ್ನು ರಕ್ಷಿಸಲೇಬೇಕು. ದೂರನ್ನು ದಾಖಲಿಸಿದಾಗ ಗೋವುಗಳನ್ನು ರಕ್ಷಿಸಲು ಪೊಲೀಸರಿಗೆ ಆಗದಿದ್ದರೆ ಪೊಲೀಸ್ ವಿಫಲತೆಗೆ ಯಾರು ಕಾರಣರೋ ಅವರಿಗೆ ಶಿಕ್ಷೆಯಾಗುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದು ಮತ್ತು ವಿಫಲವಾದರೆ ಪೊಲೀಸ್ ವೈ-ಲ್ಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನ್ಯಾಯಾಲಯದಲ್ಲಿ ಸೂಕ್ತ ದಾವೆ ಹಾಕಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಶೇಟ್, ರವಿ ಅಸೈಗೋಳಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article