ರಾಜ್ಯ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ-ವಿ.ಹಿಂ.ಪ. ವಿರೋಧ: ಶರಣ್ ಪಂಪ್‌ವೆಲ್
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜುಗಳ ಪಾವಿತ್ರ್ಯತೆ ಇರುವ ಸ್ಥಳಗಳು. ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡುವ ಮೂಲಕ ಸರಕಾರ ಮತಾಂಧತೆಗೆ ಅವಕಾಶ ನೀಡಿದಂತಾಗಿದೆ. ಇದು ರಾಜ್ಯ ಸರಕಾರದ ಓಲೈಕೆ ನೀತಿಯಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರ ಹಿಜಾಬ್ ಪ್ರೇಮಿ ಸರಕಾರವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಸರಕಾರದ ಈ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿಯಬೇಕಿದೆ. ಯುವಶಕ್ತಿ ಪ್ರತಿಭಟನೆ ನಡೆಸಬೇಕಿದ್ದು, ವಿಹಿಂಪ ಬೆಂಬಲಿಸಲಿದೆ. ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಲಾ ಕಾಲೇಜಿಗೆ ಆಗಮಿಸಿದರೆ ನಾವು ಬೆಂಬಲಿಸುತ್ತೇವೆ ಎಂದರು.
ವಿಶೇಷ ಪೊಲೀಸ್ ತಂಡ ರಚಿಸಿ...
ಕರಾವಳಿ ಪ್ರದೇಶ ಪ್ರಸ್ತುತ ಶಾಂತಿಯುತವಾಗಿದ್ದು, ಗೋವುಗಳ ಹತ್ಯೆ, ಅಕ್ರಮ ಸಾಗಾಟ ನಡೆದರೆ ಮತ್ತು ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾಗಬಹುದು. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಅಽಕೃತ ಕಸಾಯಿಖಾನೆ ಇದ್ದು, ಮಂಗಳೂರು ಸಹಿತ ರಾಜ್ಯದ ವಿವಿಧೆಡೆ ಅಕ್ರಮ ಕಸಾಯಿಖಾನೆಗಳಿಂದ ಗೋಮಾಂಸ ಪೂರೈಕೆಯಾಗುತ್ತಿದೆ. ಮೇ ತಿಂಗಳಿನಲ್ಲಿ 20ಕ್ಕೂ ಹೆಚ್ಚು ಗೋಹತ್ಯೆ, ಅಕ್ರಮ ಸಾಗಾಟ ಪ್ರಕರಣಗಳು ನಡೆದಿವೆ. ಡ್ರಗ್ಸ್ ಹಾಗೂ ಇತರ ದಂಧೆಗಳಿಗೆ ಪೊಲೀಸರು ಕಡಿವಾಣ ಹಾಕಿದ್ದು, ಗೋವಿನ ವಿಚಾರದಲ್ಲೂ ಇಂತಹ ನಿರ್ಧಾರ ಕೈಗೊಳ್ಳಬೇಕು. ಅದಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಬೇಕು ಎಂದರು.
ಗೋಹತ್ಯೆ ಮುಕ್ತ ಬಕ್ರೀದ್..
ಗೋಮಾಂಸ ಸೇವನೆ ವಿಚಾರದಲ್ಲಿ ಬಂಟ್ವಾಳದ ಗೂಡಿನಬಳಿ ಎಂಬಲ್ಲಿ ಎಸ್‌ಡಿಪಿಐ ಮುಖಂಡ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಗೋಹತ್ಯೆ ತಡೆಯುವುದು ನಮ್ಮ ಹಕ್ಕು. ಈ ಬಾರಿಯ ಬಕ್ರೀದ್‌ನಲ್ಲಿ ಗೋಹತ್ಯೆ ಮಾಡಬೇಡಿ, ಗೋವುಗಳನ್ನು ಕುರ್ಬಾನಿ ನೀಡಬೇಡಿ ಎಂದು ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಸಮಾಜ ಹಾಗೂ ರಾಜಕೀಯ ಮುಖಂಡರು ಕರೆ ನೀಡಲಿ. ಆ ಮೂಲಕ ನಿಜವಾದ ಸಾಮರಸ್ಯ, ಸೌಹಾರ್ದತೆ ಪ್ರಕಟಿಸಲಿ. ಗೋಹತ್ಯೆ ಮುಕ್ತ ಬಕ್ರೀದ್ ನಡೆಯಲಿ ಎಂದು ಹೇಳಿದರು.