ಜನರಿಂದ ತಿರಸ್ಕೃತ ಆಗಿರುವ ಕಾಂಗ್ರೆಸ್ ಈಗ ಪ್ರಧಾನಿ ವಿರುದ್ಧ ಮಾಜಿ ಸಚಿವ ರಮಾನಾಥ ರೈ ಮೂಲಕ ಹತಾಶೆಯ ಹೇಳಿಕೆ ನೀಡುತ್ತಿದೆ: ಅರುಣ್ ಜಿ. ಶೇಟ್
ಮೂರು ಬಾರಿ ದೇಶದ ಜನರಿಂದ ಸ್ಪಷ್ಟ ಜನಾದೇಶವನ್ನು ಪಡೆದಿರುವ ಪ್ರಧಾನಿಯ ವಿರುದ್ಧ ಇಂತಹ ಹಗುರವಾದ ಭಾಷೆ ಬಳಸುವುದು ಕಾಂಗ್ರೆಸ್ ನಾಯಕರ ಅಸಹನೀಯ ಮನೋಭಾವವನ್ನು ತೋರಿಸುತ್ತಿದೆ ಎಂದು ಹೇಳಿದರು.
ಹಲವಾರು ವರ್ಷಗಳ ಕಾಲ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಹಾಗೂ ತಮ್ಮ ಅಸಮರ್ಪಕ ನೀತಿಯಿಂದ ದೇಶವನ್ನು ಪಾರ್ಶ್ವವಾಯುವಿನಲ್ಲಿ ಮುಳುಗಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಇಂದು ಭಾರತ ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದು ಸಹಿಸಿಕೊಳ್ಳಲಾಗುತ್ತಿಲ್ಲ. ಇದೀಗ ವಿರೋಧ ಪಕ್ಷದಲ್ಲಿದ್ದರೂ ಸರಿಯಾದ ನಿರ್ವಹಣೆ ತೋರಲು ವಿಫಲವಾಗಿರುವ ಕಾಂಗ್ರೇಸ್ ಇಡಿಯ ದೇಶದಲ್ಲಿ ನಡೆದಿರುವ ಪ್ರತಿ ಚುನಾವಣೆಯಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಹ ಪರಿಸ್ಥಿತಿಯಾಗಿದೆ. ಈ ಹತಾಶೆಯಿಂದ ಪ್ರಧಾನಿ ವಿರುದ್ಧ ನಂಜಿನ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಬಳಿಕವೂ ಭಾರತ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಮೂಲಸೌಕರ್ಯ, ಡಿಜಿಟಲ್ ಕ್ರಾಂತಿ, ರಾಷ್ಟ್ರೀಯ ಭದ್ರತೆ, ರೈಲು, ಹೆದ್ದಾರಿ ಮತ್ತು ವಿದೇಶಾಂಗ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಸಾಧನೆ ಮಾಡುತ್ತಿರುವುದು ಕಾಂಗ್ರೆಸ್ ನ ಮುಂದಿನ ಭವಿಷ್ಯ ಮಂಕಾಗಿರುವುದು ಅವರಿಗೇ ಸ್ಪಷ್ಟವಾಗಿ ಗೋಚರಿಸುತ್ತಿರುವ ಪರಿಣಾಮ ತಿರುಕನ ಕನಸು ಕಾಣಲು ಹೊರಟಿದೆ ಅಷ್ಟೇ...!
ಪ್ರಧಾನಿಯವರು ಉಲ್ಲೇಖಿಸಿದ ಇಂಧನ ಮತ್ತು ಬಂಗಾರದ ಬಗ್ಗೆ ಜಾಗತಿಕ ಪರಿಸ್ಥಿಯನ್ನು ಮುಂದಿಟ್ಟುಕೊಂಡು ಜನರು ಯಾವ ರೀತಿ ಎಚ್ಚರಿಕೆ ವಹಿಸಿ ರಾಷ್ಟ್ರದ ಔನ್ಯತ್ಯಕ್ಕೆ ತಮ್ ಕೊಡುಗೆ ನೀಡಬಹುದು ಎಂಬ ಹೇಳಿಕೆಯನ್ನು ತಿರುಚಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಜಾಗತಿಕ ಯುದ್ಧ ಪರಿಸ್ಥಿತಿ, ಕಚ್ಚಾ ತೈಲದ ಅಂತರರಾಷ್ಟ್ರೀಯ ಬೆಲೆ ಏರಿಕೆ ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ ಎಂದು ಟೀಕಿಸಿದರು. ಕಾಂಗ್ರೇಸ್ ನ ಆಢಳಿತದ ಅವಧಿಯಲ್ಲಿ ಯಾವ ರೀತಿ ದೇಶದ ಆರ್ಥಿಕತೆ ಫ್ರೆಜೈಲ್ ಫೈವ್ ಗೆ ಕೊಂಡೊಗಿತ್ತು ಎನ್ನುವುದನ್ನು ಒಂದು ಸರ್ತಿ ನೆನಪಿಸಿಕೊಳ್ಳಲಿ ಎಂದು ಟೀಕಿಸಿದರು.
ನೀಟ್ ಪರೀಕ್ಷೆ ಕುರಿತು ಮಾತನಾಡುವ ಕಾಂಗ್ರೆಸ್ ಮೊದಲು ತಮ್ಮ ಆಡಳಿತದ ಅವಧಿಯಲ್ಲಿ ನಡೆದ ಶಿಕ್ಷಣ ಕ್ಷೇತ್ರದ ಹಗರಣಗಳು ಮತ್ತು ರಾಜಕೀಯ ಹಸ್ತಕ್ಷೇಪಗಳ ಬಗ್ಗೆ ಆತ್ಮಪರಿಶೀಲನೆ ಮಾಡಲಿ. ಯುವಜನರ ಭವಿಷ್ಯದ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ರಾಜ್ಯದಲ್ಲಿ ಯುವಕರು ಕೆಲಸಕ್ಕಾಗಿ ಪ್ರತಿಭಟನೆಗೆ ಇಳಿಯುವ ಪ್ರಮೇಯ ಬರುತ್ತಿರಲಿಲ್ಲಾ.
ಜನತೆ ಕಾಂಗ್ರೆಸ್‌ನ ಸುಳ್ಳು ಘೋಷಣೆಗಳು ಮತ್ತು ಭಾವನಾತ್ಮಕ ರಾಜಕೀಯವನ್ನು ಬಹಳ ಹಿಂದೆಯೇ ತಿರಸ್ಕರಿಸಿದ್ದಾರೆ. ಆದ್ದರಿಂದಲೇ ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್ ನಾಯಕರು ಇಂದು ವೈಯಕ್ತಿಕ ಟೀಕೆ ಮತ್ತು ಪ್ರಚೋದನಾತ್ಮಕ ಹೇಳಿಕೆಗಳಿಗೆ ಇಳಿದಿದ್ದಾರೆ ಎಂದು ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.