ವೆನ್ಲಾಕ್ ಆಸ್ಪತ್ರೆಗೆ ಆರೋಗ್ಯ ಸೇವಾ ನೆರವು ನೀಡಿದ ರೋಹನ್ ಕಾರ್ಪೊರೇಶನ್

ವೆನ್ಲಾಕ್ ಆಸ್ಪತ್ರೆಗೆ ಆರೋಗ್ಯ ಸೇವಾ ನೆರವು ನೀಡಿದ ರೋಹನ್ ಕಾರ್ಪೊರೇಶನ್


ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್ ಮೇ.24 ರಂದು ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ‘ಇವಿನಿಂಗ್ ಆಫ್ ಗ್ರ್ಯಾಟಿಟ್ಯೂಡ್-2026’ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ಚಾನೆಲ್ ಪಾರ್ಟ್‌ನರ್‌ಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತಂದ ಈ ಕಾರ್ಯಕ್ರಮವು ಸಹಭಾಗಿತ್ವದ ಮೌಲ್ಯ, ಸಾಮಾಜಿಕ ಬದ್ಧತೆ ಹಾಗೂ ಮಂಗಳೂರಿನ ಭವಿಷ್ಯದ ಬೆಳವಣಿಗೆಯ ಕುರಿತ ಸಮಗ್ರ ದೃಷ್ಟಿಕೋನವನ್ನು ಅನಾವರಣಗೊಳಿಸಿತು.

ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ, ‘ಒಮ್ಮೆ ಶಾಂತ ಕರಾವಳಿ ನಗರವಾಗಿ ಗುರುತಿಸಿಕೊಂಡಿದ್ದ ಮಂಗಳೂರು ಇಂದು ಅವಕಾಶಗಳ, ಅಭಿವೃದ್ಧಿಯ ಮತ್ತು ಮಹತ್ವಾಕಾಂಕ್ಷೆಗಳ ನಗರವಾಗಿ ಹೊಸ ಹೆಜ್ಜೆ ಇಡುತ್ತಿದೆ. ಈ ಪರಿವರ್ತನೆಯನ್ನು ರೂಪಿಸುವಲ್ಲಿ ರೋಹನ್ ಕಾರ್ಪೊರೇಶನ್‌ನಂತಹ ಜವಾಬ್ದಾರಿಯುತ ಡೆವಲಪರ್‌ಗಳ ಪಾತ್ರ ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.

ರೋಹನ್ ಕಾರ್ಪೊರೇಷನ್‌ನ ನಿರ್ದೇಶಕ ಡಿಯೋನ್ ಮೊಂತೇರೊ ಮಾತನಾಡಿ, ಐಟಿ ಕಂಪನಿಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು ಹಾಗೂ ಜಾಗತಿಕ ಕೇಂದ್ರ ಕಚೇರಿಗಳನ್ನು ಮಂಗಳೂರಿಗೆ ಕರೆತಂದು, ನಗರವನ್ನು ಬೆಳವಣಿಗೆ, ಹೂಡಿಕೆ ಮತ್ತು ಅವಕಾಶಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಸಂಸ್ಥೆಯ ಆಶಯವನ್ನು ಹಂಚಿಕೊಂಡರು. ‘ಮಂಗಳೂರಿಗೆ ಭಾರತದ ಅತ್ಯಂತ ಮಹತ್ವದ ಉದಯೋನ್ಮುಖ ನಗರಗಳಲ್ಲಿ ಒಂದಾಗಲು ಬೇಕಾದ ಪ್ರತಿಭೆ, ಗುಣಮಟ್ಟದ ಜೀವನಶೈಲಿ ಮತ್ತು ಸಂಪರ್ಕ ವ್ಯವಸ್ಥೆಯಿದೆ’ ಎಂದರು.

ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಮಾತನಾಡಿ, ‘ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಎಸ್‌ಆರ್ ಯೋಜನೆಗಳು, ಸಮಾಜಮುಖಿ ಕಾರ್ಯಗಳು ಮತ್ತು ಅರ್ಥಪೂರ್ಣ ಕೊಡುಗೆಗಳ ಮೂಲಕ ಮಂಗಳೂರಿನ ಅಭಿವೃದ್ಧಿಯಲ್ಲಿ ನಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು.

ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಅವರು, ವೆನ್ಲಾಕ್ ಆಸ್ಪತ್ರೆಗೆ ನೀಡಲಾದ ಆಧುನಿಕ ವೈದ್ಯಕೀಯ ಉಪಕರಣಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವಾರು ರೋಗಿಗಳಿಗೆ ತುಂಬ ಸಹಕಾರಿಯಾಗಲಿವೆ ಎಂದ ಅವರು ಈ ಮಹತ್‌ಕಾರ್ಯದ ಪರವಾಗಿ ರೋಹನ್ ಕಾರ್ಪೊರೇಷನ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ದೇಶದ ಅತ್ಯಂತ ಹೆಸರಾಂತ ಉದ್ಯಮ ತಜ್ಞರಾದ ಅಂಕುಶ್ ಸಯಲ್, ದೀಪ್ತಿ ಮಲಿಕ್, ಹೇಮ್ ಬಾತ್ರಾ, ನವದೀಪ್ ಸಿಂಗ್ ಖನುಜಾ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article