ಬೆಲೆಯೇರಿಕೆ ಮತ್ತು ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರುದ್ಧ ಪ್ರತಿಭಟನೆ

ಬೆಲೆಯೇರಿಕೆ ಮತ್ತು ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರುದ್ಧ ಪ್ರತಿಭಟನೆ


ಮಂಗಳೂರು: ಕೇಂದ್ರ ಸರಕಾರ ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ನೆಪಹೇಳಿ ಪೆಟ್ರೋಲ್, ಡೀಸಿಲ್ ಅಡುಗೆ ಅನಿಲ ಹಾಗೂ ಸಿಎನ್‌ಜಿ ಬೆಲೆಗಳನ್ನು ಪ್ರತಿದಿನದಂತೆ ಏರಿಸುತಿದ್ದು, ಇದರಿಂದ ಇತರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಅಗಾಧವಾಗಿ ಏರಲಿದೆ. ಈಗಲೆ ಜೀವನ ನಡೆಸಲು ಕಷ್ಟ ಪಡುತ್ತಿರುವ ಜನಸಾಮಾನ್ಯರು ಕಂಗಾಲಾಗಲಿದ್ದಾರೆ. ಬೆಲೆಯೇರಿಕೆ ತಡೆಗಟ್ಟಲಿದ್ದೇವೆ ಎಂಬ ಆಶ್ವಾಸನೆಯೊಂದಿಗೆ ಗೆದ್ದು ಬಂದ ಸರಕಾರ ಬೆಲೆಗಳನ್ನು ನಿಯಂತ್ರಿಸುವ ಬದಲಾಗಿ ಬೆಲೆ ಏರಿಸುತ್ತಿರುವುದು ನಿಜಕ್ಕೂ ವಿರ‍್ಯಾಸ. ನಾವು ಕೇಂದ್ರ ಸರಕಾರದ ಈ ಧೋರಣೆಯನ್ನು ಖಂಡಿಸುತ್ತೇವೆ ಹಾಗೂ ಬೆಲೆಯೇರಿಕೆಯನ್ನು ತಡೆಗಟ್ಟಲು ಸರಕಾರ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ದ.ಕ. ಹಾಗೂ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ. ಶೇಖರ ಹೇಳಿದರು. 

ಅವರು ಮೇ.27 ರಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಹಾಗೂ ನೇಷನಲ್ ಫೆಡರಶನ್ ಆಫ್ ಇಂಡಿಯನ್ ಉಮನ್(ಎನ್‌ಎಫ್‌ಐಡ್ಬö್ಯ) ಜಂಟಿಯಾಗಿ ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಪ್ರದರ್ಶನದಲ್ಲಿ ಮಾತನಾಡಿ, ಅವರು ರಾಜ್ಯ ಸರಕಾರ ಆರೋಗ್ಯ ಕೇಂದ್ರಗಳ ಖಾಸಗೀಕರಣಗೊಳಿಸುವುದನ್ನು ಖಂಡಿಸಿದರು.

ಎಐಟಿಯುಸಿಯ ಜಿಲ್ಲಾ ಅಧ್ಯಕ್ಷ ಹೆಚ್.ವಿ. ರಾವ್ ಮಾತನಾಡಿ, ರಾಜ್ಯ ಸರಕಾರ ಕಾರ್ಮಿಕರ ಕನಿಷ್ಟ ವೇತನವನ್ನು ಹೆಚ್ಚಿಸಿ ಹೊರಡಿಸಿದ ಆಧ್ಯಾದೇಶವನ್ನು ಸ್ವಾಗತಿಸಿದರು. ಕಾರ್ಮಿಕ ಕಾನೂನುಗಳನ್ನು ಬದಲಿಸಿ ೪ ಕಾಮಿಕ ಕೋಡ್‌ಗಳನ್ನು ತಂದ ಕೇಂದ್ರ ಸರಕಾರದ ನಡೆಯನ್ನು ಅವರು ಖಂಡಿಸಿದರು.

ಎಐವೈಎಫ್‌ನ ಅಧ್ಯಕ್ಷ ಪುಷ್ಪರಾಜ್ ಬಿ. ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಲು ಕಾರಣವಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಎನ್‌ಎಫ್‌ಐಡ್ಬö್ಯನ ಭಾರತಿ ಪ್ರಶಾಂತ್ ಮಾತನಾಡಿ, ಸರಕಾರಿ ಆಸ್ಪತ್ರೆಗಳ ಶೋಚನೀಯ ಸ್ಥಿತಿಗಳನ್ನು ವಿವರಿಸಿ ಸರಕಾರ ಈ ಬಗ್ಗೆ ಕೂಡಲೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಸೀತಾರಾಮ ಬೇರಿಂಜೆ ಕಾಯಕ್ರಮ ನಿರೂಪಿಸಿ, ಸುರೇಶ್ ಬಂಟ್ವಾಳ್ ವಂದಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವಿ. ಕ್ಯುಕ್ಯಾನ್, ಕರುಣಾಕರ ಎಮ್, ತಿಮ್ಮಪ್ಪ, ಕೃಷ್ಣಪ್ಪ, ಗೀತಾ ಬಜಾಲ್, ಆಶಿರ್ವಾದ್, ಬಾಬು ಭಂಡಾರಿ, ಹರ್ಶಿತ್, ಪ್ರೇಮನಾಥ ಮತ್ತಿತರರು ವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article