ಅಕ್ರಮ-ಸಕ್ರಮ ಅರ್ಜಿ ವಿಚಾರದಲ್ಲಿ ಹಾಲಿ ಶಾಸಕರು ಜನತೆಗೆ ಸುಳ್ಳು ಸಂದೇಶ ನೀಡುತ್ತಿದ್ದಾರೆ: ಸಂಜೀವ ಮಠಂದೂರು ಆರೋಪ

ಅಕ್ರಮ-ಸಕ್ರಮ ಅರ್ಜಿ ವಿಚಾರದಲ್ಲಿ ಹಾಲಿ ಶಾಸಕರು ಜನತೆಗೆ ಸುಳ್ಳು ಸಂದೇಶ ನೀಡುತ್ತಿದ್ದಾರೆ: ಸಂಜೀವ ಮಠಂದೂರು ಆರೋಪ


ಪುತ್ತೂರು: ಅಕ್ರಮ-ಸಕ್ರಮ ಅರ್ಜಿ ವಿಚಾರದಲ್ಲಿ ಹಾಲಿ ಶಾಸಕರು ಜನತೆಗೆ ಸುಳ್ಳು ಸಂದೇಶ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ಅಶೋಕ್ ಕುಮಾರ್ ರೈ ಎಲ್ಲಾ ಕಡೆಗಳಲ್ಲಿ ತಾನು ಶಾಸಕನಾಗಿ ಬರುವ ಸಮಯದಲ್ಲಿ 32 ಸಾವಿರ ಅಕ್ರಮ-ಸಕ್ರಮ ಅರ್ಜಿಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಪೆಂಡಿಂಗ್ ಇಟ್ಟಿದ್ದರು, ನಾನು ಬಂದ ಬಳಿಕ ಎಲ್ಲಾ ಅರ್ಜಿಗಳ ವಿಲೇವಾರಿ ಮಾಡಿದ್ದೇನೆ ಎನ್ನುತ್ತಿದ್ದಾರೆ. ಆದರೆ ಪುತ್ತೂರು ತಾಲೂಕಿನಲ್ಲಿ ಈವರೆಗೆ ಬಂದ ಅರ್ಜಿಗಳ ಒಟ್ಟು ಸಂಖ್ಯೆ  94\C ಯಲ್ಲಿ 16210, 94CC ಯಲ್ಲಿ 3101. ಶಾಸಕರು ಹೇಳುವ 32 ಸಾವಿರ ಅರ್ಜಿ ಯಾವುದರದ್ದು ಅನ್ನೋದನ್ನು ಶಾಸಕರು ಜನರ ಮುಂದೆ ಸ್ಪಷ್ಟಪಡಿಸಬೇಕು. ಶಾಸಕರು ನನ್ನ ಮೇಲೆ 45 ಜನರು ಲಂಚ ನೀಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. 

ಶಾಸಕರಿಗೆ ತಾಕತ್ತಿದ್ದರೆ ಹಣ ನೀಡಿದ 45 ಜನರನ್ನು ಒಂದು ಕಡೆ ಕರೆದುಕೊಂಡು ಬರಲಿ, ನಾವೂ ಬರುತ್ತೇವೆ. ಎಲ್ಲಿ, ಯಾರಿಗೆ ,ಯಾವುದರ ಮೂಲಕ ಹಣ ನೀಡಿರೋದು ಅನ್ನೋದನ್ನು ಆ 45 ಜನ ಹೇಳಬೇಕು. ಅದು ದೇವಸ್ಥಾನವಾಗಿರಲಿ, ಅಥವಾ ಬೇರೆ ಯಾವುದೇ ಕ್ಷೇತ್ರವಿರಲಿ, ನಾವು ಬರಲು ಸಿದ್ಧರಿದ್ದೇವೆ‌. ಶಾಸಕರು ತಾಕತ್ತಿದ್ದರೆ ಅವರನ್ನು ಕರೆತರುವ ಕೆಲಸ ಮಾಡಲಿ. ಅದು ಬಿಟ್ಟು ಸುಳ್ಳನ್ನೇ ಹೇಳಿಕೊಂಡು ಪಲಾಯನ ವಾದ ಮಾಡೋದನ್ನ ಶಾಸಕರು ನಿಲ್ಲಿಸಬೇಕು ಎಂದರು. 

ಒಟ್ಟು ಬಂದ 94c 16210 ಅರ್ಜಿಗಳಲ್ಲಿ 8411 ಅರ್ಜಿಗಳು ಸ್ವೀಕೃತವಾಗಿದ್ದು, 6959  ಅರ್ಜಿಗಳು ತಿರಸ್ಕೃತವಾಗಿದೆ. ಅದೇ ರೀತಿ 94cc ಯಲ್ಲಿ 3101 ರಲ್ಲಿಗಳು ಬಂದಿದ್ದು, ಅವುಗಳಲ್ಲಿ 1534 ಅರ್ಜಿ ಸ್ವೀಕೃತವಾಗಿದ್ದು, 1426 ಅರ್ಜಿಗಳು ತಿರಸೃತವಾಗಿದೆ.  ಸ್ವೀಕೃತಗೊಂಡ 8411 ಅರ್ಜಿಗಳಲ್ಲಿ 4440 ಅರ್ಜಿಗಳನ್ನು ಬಿಜೆಪಿ ಶಾಸಕರು ವಿಲೇವಾರಿ ಮಾಡಿದ್ದು, ಉಳಿದ 4 ಸಾವಿರದಷ್ಟು ಅರ್ಜಿಗಳನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮತ್ತು ಈಗಿನ ಶಾಸಕ ಅಶೋಕ್ ಕುಮಾರ್ ರೈ ವಿಲೇವಾರಿ ಮಾಡಿರಬಹುದು. 

ಸರಕಾರಕ್ಕೆ ಸೇರಿದ ಜಾಗವನ್ನು ಫಲಾನುಭವಿಗಳಿಗೆ ನೀಡುವ ಸಂದರ್ಭದಲ್ಲಿ ಆತ ಹಿಂದುವೋ, ಮುಸ್ಲಿಮೋ, ಕಾಂಗ್ರೇಸ್, ದಳ, ಬಿಜೆಪಿ ಬೂತ್ ಅಧ್ಯಕ್ಷ ಯಾವುದನ್ನೂ ನೋಡಿಲ್ಲ. ಅದು ರಾಜಧರ್ಮವೂ ಅಲ್ಲ.  ಆದರೆ ಈಗಿನ ಶಾಸಕ ಅಶೋಕ್ ಕುಮಾರ್ ರೈ  ಹಕ್ಕುಪತ್ರ ನೀಡಿ ಅವರಲ್ಲಿ ಓಟು ಕೇಳುವ ಕೀಳುಮಟ್ಟದ ರಾಜಕೀಯವನ್ನು ನಾನು ಯಾವತ್ತೂ ಮಾಡಿಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್‌, ಮಾಜಿ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬಲ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷರೂ ಮತ್ತು ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯೆ ಪರಮೇಶ್ವರಿ ಭಟ್, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article